ಮೈಸೂರು

ಪ್ರತಿಭೆಯನ್ನು ಹೊರತರಲು ಪೋಷಕರು ಮುಂದಾಗಬೇಕು : ಸಂದೇಶ ಸ್ವಾಮಿ

ಪ್ರತಿಭೆಯನ್ನು ಹೊರತರಲು ಕಲೆ, ಸಾಹಿತ್ಯ ಮತ್ತು ಇನ್ನಿತರೆ ಕ್ಷೇತ್ರಗಳಲ್ಲಿ ಬೆಳೆಯಲು ಪೋಷಕರು ಹಾಗೂ ಶಾಲೆಗಳು ಮುಂದಾಗಬೇಕು  ಎಂದು ಮಾಜಿ ಮೇಯರ್ ಸಂದೇಶಸ್ವಾಮಿ ತಿಳಿಸಿದರು.

ಮೈಸೂರಿನ ಕಲಾಮಂದಿರದಲ್ಲಿ ಸಿಐಎಸ್‍ಪಿಎಂಎಎಂ, ಸಿಬಿಎಸ್‍ಸಿ, ಐಸಿಎಸ್‍ಇ ಮತ್ತು ರಾಜ್ಯ ಖಾಸಗಿ ಶಾಲೆಗಳ ಮ್ಯಾನೇಜ್‍ಮೆಂಟ್ ಅಸೋಸಿಯೇಷನ್ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಅಂತರ ಶಾಲಾ ಪ್ರತಿಭಾ ಕಾರಂಜಿ ಕ್ರೀಡಾ, ಸಾಹಿತ್ಯ ಮತ್ತು ಸಹಪಠ್ಯದಲ್ಲಿ ಬಹುಮಾನ ಗಳಿಸಿದ ಶಾಲಾ ವಿದ್ಯಾರ್ಥಿಗಳಿಗೆ ಗುರುವಾರ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಸಂದೇಶಸ್ವಾಮಿ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಸರ್ಕಾರಿ ಶಾಲೆ ಖಾಸಗೀ ಶಾಲೆಗಳ ವ್ಯಾಪಾರೀಕರಣದಿಂದ ಮೂಲೆಗುಂಪಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಕಳೆದ ಒಂದು ತಿಂಗಳಿನಿಂದ ಮೈಸೂರು, ಮಂಡ್ಯ, ಚಾಮರಾಜನಗರ ಹಾಗೂ ಕೊಡಗು ಜಿಲ್ಲೆಯಲ್ಲಿರುವ 60ಕ್ಕೂ ಹೆಚ್ಚಿನ ಖಾಸಗಿ ಸಿಬಿಎಸ್‍ಸಿ ಮತ್ತು ಐಸಿಎಸ್‍ಇ ಶಾಲೆಗಳಲ್ಲಿ ವಿವಿಧ ಸ್ಪರ್ಧೆಗಳು ನಡೆದಿದ್ದವು. ಅದರಂತೆ ಪ್ರತಿಭಾ ಕಾರಂಜಿಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.
ದಕ್ಷಿಣ ಕನ್ನಡದ ಸಾಂಪ್ರದಾಯಿಕ ಕುಣಿತದಲ್ಲೊಂದಾದ ಭೂತ ಕೋಲ ಹಾಡನ್ನು ದಿ ಆರ್ಕಿಡ್ ಪಬ್ಲಿಕ್ ಶಾಲೆ ಮಕ್ಕಳು ಅದ್ಭುತವಾಗಿ ವೇದಿಕೆಯ ಮೇಲೆ ನೃತ್ಯಗಳ ಮೂಲಕ ಪ್ರದರ್ಶಿಸಿದರು.

ಸಮಾರಂಭದಲ್ಲಿ ಮೈಸೂರು ಜಿಲ್ಲಾಧಿಕಾರಿ ಡಿ.ರಂದೀಪ್, ಎಫ್‍ಕೆಸಿಸಿಐ ಉಪಾಧ್ಯಕ್ಷ ಸುಧಾಕರ್ ಎಸ್. ಶೆಟ್ಟಿ, ಬಿಜೆಪಿ ಮುಖಂಡ ಕೌಟಿಲ್ಯ ರಘು, ಸಿಸ್ಪ್‍ಮಮ್ ಉಪಾಧ್ಯಕ್ಷರಾದ ಎಂ.ಎಲ್.ರವೀಂದ್ರಸ್ವಾಮಿ, ವಿ.ವೆಂಕಟೇಶ್, ಕಾರ್ಯದರ್ಶಿ ಎಸ್.ರಾಧಾಕೃಷ್ಣ, ಜಂಟಿ ಕಾರ್ಯದರ್ಶಿ ಎಂ.ಎಸ್.ಸಂತೋಷ್‍ಕುಮಾರ್, ಖಜಾಂಚಿ ಕೆ.ಎಸ್.ಸ್ವರೂಪಿಣಿ  ಮತ್ತಿತರರು ಉಪಸ್ಥಿತರಿದ್ದರು.

Leave a Reply

comments

Related Articles

error: