ಸುದ್ದಿ ಸಂಕ್ಷಿಪ್ತ

ಎನ್.ಹೆಚ್.ಆಸ್ಪತ್ರೆಯಲ್ಲಿ ನಾಳೆ ವಿವಿಧ ತಪಾಸಣಾ ಶಿಬಿರ

ಮೈಸೂರು,ಜೂ.12 : ನಾರಾಯಣ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಜೂ.13ರಂದು ಬೆಳಗ್ಗೆ 10 ರಿಂದ ಮಧ್ಯಾಹ್ನ 2ರವರೆಗೆ ರಕ್ತದೊತ್ತಡ ಪರೀಕ್ಷಾ ಹಾಗೂ ವೈದ್ಯರೊಂದಿಗೆ ಆಪ್ತ ಸಮಾಲೋಚನೆ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿದೆ.

ಕರುಳಿನ ಕ್ಯಾನ್ಸರ್ :  ಅಂದೇ ಜಠರ ಕರುಳಿನ ಕ್ಯಾನ್ಸರ್ ತಪಾಸಣಾ ಶಿಬಿರವನ್ನು ನಡೆಸಲಾಗುತ್ತಿದೆ.

ಹರ್ನಿಯ ಸಂಜೆ ಕ್ಲಿನಿಕ್ : ಅಂದು ಸಂಜೆ 4 ರಿಂದ 6 ಗಂಟೆಯವರೆಗೆ ಹರ್ನಿಯ ಸಂಜೆ ಕ್ಲಿನಿಕ್ ಅನ್ನು ನಡೆಸಲಾಗುವುದು ಎಂದು ಮಾರುಕಟ್ಟೆ ಮುಖ್ಯಸ್ಥರಾದ ಕೆ.ವಿ.ಕಾಮತ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: