ಮೈಸೂರು

ಬಿಜೆಪಿ ಮಹಿಳಾ ಮೋರ್ಚಾ ವತಿಯಿಂದ ಉಚಿತ ಕಣ್ಣಿನ ತಪಾಸಣೆ

ಮೈಸೂರಿನ ಚಾಮುಂಡಿವನದಲ್ಲಿ ಶ್ರೀಭಗವಾನ್ ಮಹಾವೀರ್ ದರ್ಶನ್ ಕಣ್ಣಿನ ಆಸ್ಪತ್ರೆಯ ಸಹಯೋಗದೊಂದಿಗೆ ಬುಧವಾರ ಭಾರತೀಯ ಜನತಾಪಾರ್ಟಿ ಕೃಷ್ಣರಾಜ ಕ್ಷೇತ್ರದ ಮಹಿಳಾ ಮೋರ್ಚಾ ವತಿಯಿಂದ  ಉಚಿತ ಕಣ್ಣಿನ ತಪಾಸಣೆ, ನೇತ್ರದಾನ ನೋಂದಣಿ, ಅರಿವು ಮೂಡಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮದಲ್ಲಿ  ಪಾಲ್ಗೊಂಡ  ಮಾಜಿ ಸಚಿವ ಎಸ್.ಎ.ರಾಮದಾಸ್ ಮಾತನಾಡಿ ದೃಷ್ಟಿ ಕಳೆದುಕೊಂಡವರ ಸಂಖ್ಯೆ ದೇಶದಲ್ಲಿ 20ಲಕ್ಷದಷ್ಟಿದ್ದು, ಪ್ರತಿವರ್ಷ 20ಸಾವಿರ ಪಟ್ಟಿಗೆ ಸೇರುತ್ತಾ ಇದ್ದಾರೆ. ಈ ಸಮಸ್ಯೆಗೆ 75%ರಷ್ಟು ಗುಣಮುಖವಾಗಲು ವೈದ್ಯಕೀಯ ಕ್ಷೇತ್ರದಲ್ಲಿ ಅವಕಾಶವಿದೆ ಎಂದು ತಿಳಿಸಿದರು.

ಈ ಸಂದರ್ಭ ಡಾ.ಉದಯ ಕಿರಣ್ ಕೆ., ಕೆ.ಪಿ.ಪ್ರದ್ಯಮ್ನ, ನಗರಪಾಲಿಕೆ ಸದಸ್ಯ ಬಿ.ವಿ.ಮಂಜುನಾಥ, ಪ್ರಧಾನಕಾರ್ಯದರ್ಶಿ ಅನ್ನಪೂರ್ಣ, ರೇಖ, ಅಲ್ಪಸಂಖ್ಯಾತ ಮೋರ್ಚಾದ ಅಧ್ಯಕ್ಷ  ಪರ್ವೀನ್ ತಾಜ್, ಪ್ರಧಾನ ಕಾರ್ಯದರ್ಶಿ ನಜೀರ್ ಉಪಸ್ಥಿತರಿದ್ದರು.

Leave a Reply

comments

Related Articles

error: