ಕರ್ನಾಟಕಪ್ರಮುಖ ಸುದ್ದಿಮನರಂಜನೆಮೈಸೂರು

ಚಲನಚಿತ್ರೋತ್ಸವ ಪ್ರಶಸ್ತಿ ಪ್ರದಾನ : ಕನ್ನಡದ ಅತ್ಯುತ್ತಮ ಚಿತ್ರ ಪ್ರಶಸ್ತಿ ಪಡೆದ ರಾಮಾ ರಾಮಾ ರೇ

ಮೈಸೂರಿನಲ್ಲಿ 9ನೇ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ ಪ್ರಶಸ್ತಿ ಪ್ರದಾನ ಸಮಾರಂಭ ಅರಮನೆ ಮುಂಭಾಗ ನಡೆಯಿತು.
ಸಿನಿಮೋತ್ಸವದ ಅತ್ಯುತ್ತಮ ಚಿತ್ರವಾಗಿ “ದಿ.ಫಾದರ್ ವೇಲ್” ಚಿತ್ರ ಪ್ರಶಸ್ತಿಯನ್ನು ಪಡೆದಿದೆ.
ಫಾದರ್ ವೇಲ್ ಕಿರ್ಗಿಸ್ತಾನ್  ದೇಶದ ಚಿತ್ರವಾಗಿದ್ದು,  ಏಷ್ಯಿಯನ್ ಸಿನಿಮಾ ವಿಭಾಗದ ಅತ್ಯುತ್ತಮ ಚಿತ್ರವೆಂದು ಪ್ರಶಸ್ತಿ ಪಡೆದಿದೆ. ಅತ್ಯುತ್ತಮ ಭಾರತೀಯ ಚಿತ್ರವಾಗಿ ಅನನ್ಯ ಕಾಸರವಳ್ಳಿ ನಿರ್ದೇಶನದ  ಕನ್ನಡದ  “ಹರಿಕಥಾ ಪ್ರಸಂಗ” ಚಿತ್ರ ಪ್ರಶಸ್ತಿಯನ್ನು ಪಡೆದಿದೆ.

“ಲಾತೇ ಜೋಶಿ” ಹಾಗೂ “ಕಾದು ಪುಕ್ಕುನ ನೀರಮ್” ಚಿತ್ರಗಳು ವಿಶೇಷ ಜ್ಯೂರಿ ಪ್ರಶಸ್ತಿಯನ್ನು ಪಡೆದಿವೆ.
ಪಿ.ಕೆ.ನಾಯರ್ ನೆನಪಿನ ಪ್ರಶಸ್ತಿಯನ್ನು  “ಲೇಡಿ ಆಫ್ ದಿ ಲೇಕ್” ಚಿತ್ರ ಪಡೆದಿದೆ.
ಕನ್ನಡ ವಿಭಾಗದ ಸ್ಪರ್ಧೆಗೆ ಕರ್ನಾಟಕ ಚಲನಚಿತ್ರ ಅಕಾಡೆಮಿಯಿಂದ ಪ್ರಶಸ್ತಿ ಪ್ರದಾನಿಸಲಾಯಿತು.
ಕನ್ನಡದ ಅತ್ಯುತ್ತಮ ಚಿತ್ರವಾಗಿ “ರಾಮ ರಾಮಾ ರೇ”, ಎರಡನೇ ಅತ್ಯುತ್ತಮ ಚಿತ್ರವಾಗಿ “ಪಲ್ಲಟ”,ಮೂರನೆ ಅತ್ಯುತ್ತಮ ಚಿತ್ರವಾಗಿ “ಗೋಧಿ ಬಣ್ಣ ಸಾಧಾರಣ ಮೈಕಟ್ಟು” ಚಿತ್ರಕ್ಕೆ ಪ್ರಶಸ್ತಿ ಲಭಿಸಿದೆ. ವಿಶೇಷ ಜ್ಯೂರಿ ಚಿತ್ರವಾಗಿ “ಉಪ್ಪಿನ ಕಾಗದ” ಚಿತ್ರಕ್ಕೆ ಪ್ರಶಸ್ತಿ ಲಭಿಸಿದೆ.
ಸಿನಿಮೋತ್ಸವದ ಜನಪ್ರಿಯ  ಕನ್ನಡ ಚಿತ್ರಗಳಿಗೂ  ಪ್ರಶಸ್ತಿ ಪ್ರದಾನಿಸಲಾಗಿದೆ.
ಪ್ರಥಮ ಜನಪ್ರಿಯ ಚಿತ್ರವಾಗಿ ಕಿಚ್ಚ ಸುದೀಪ್ ಅಭಿನಯದ “ಕೋಟಿಗೊಬ್ಬ-2”,ದ್ವೀತಿಯ ಜನಪ್ರಿಯ ಚಿತ್ರವಾಗಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ “ಜಗ್ಗುದಾದ”, ತೃತೀಯ ಜನಪ್ರಿಯ ಚಿತ್ರವಾಗಿ ಪವರ್ ಸ್ಟಾರ್ ಪುನಿತ್‌ರಾಜ್‌ಕುಮಾರ್ ಅಭಿನಯದ “ದೊಡ್ಮನೆ ಹುಡ್ಗ” ಚಿತ್ರಕ್ಕೆ ಪ್ರಶಸ್ತಿ ಲಭಿಸಿದೆ.
ರಾಜ್ಯಪಾಲ ವಜೂಭಾಯಿ ರೂಢಾಬಾಯಿ ವಾಲ ಪ್ರಶಸ್ತಿಯನ್ನು  ಪ್ರದಾನಿಸಿದರು.

Leave a Reply

comments

Related Articles

error: