ಪ್ರಮುಖ ಸುದ್ದಿಮೈಸೂರು

ಮೈತ್ರಿ ಸರ್ಕಾರಕ್ಕೆ ಇಂದು ಅಗ್ನಿ ಪರೀಕ್ಷೆ : ಸಚಿವ ಸ್ಥಾನದ ರೇಸ್ ನಲ್ಲಿ ತನ್ವೀರ್ ಸೇಠ್, ಹೆಚ್ ವಿಶ್ವನಾಥ್

ಮೈಸೂರು,ಜೂ.13:- ಇಂದು ಮೈತ್ರಿ ಸರ್ಕಾರದ ಸಚಿವ ಸಂಪುಟ ವಿಸ್ತರಣೆ ಹಿನ್ನೆಲೆಯಲ್ಲಿ ಮೈತ್ರಿ ಸರ್ಕಾರಕ್ಕೆ ಇಂದು ಅಗ್ನಿ ಪರೀಕ್ಷೆ ನಡೆಯಲಿದೆ.

ಮೈಸೂರು ಭಾಗದಲ್ಲಿ ಉಭಯ ಪಕ್ಷಗಳಲ್ಲಿ ಸಚಿವ ಸ್ಥಾನದ ಆಕಾಂಕ್ಷಿಗಳು ಇದ್ದು, ಕಾಂಗ್ರೆಸ್ ಪಕ್ಷದಲ್ಲಿ ಮಾಜಿ ಸಚಿವ ತನ್ವೀರ್ ಸೇಠ್ ರೇಸ್ ನಲ್ಲಿದ್ದಾರೆ.ಈ ಬಾರಿ ತನ್ವೀರ್ ಸೇಠ್ ಸಚಿವ ಸಂಪುಟ ಸೇರುತ್ತಾರಾ ಎಂಬ ಪ್ರಶ್ನೆಗಳೆದ್ದಿದೆ. ತನ್ವೀರ್ ಸೇಠ್ ಕಳೆದ ಬಾರಿ ಸಚಿವ ಸಂಪುಟದ ಪ್ರಬಲ ಆಕಾಂಕ್ಷಿಯಾಗಿದ್ದರು. ತನ್ವೀರ್ ಸೇಠ್ ಹಳೆ ಮೈಸೂರು ಭಾಗದ ಹಿರಿಯ ಕಾಂಗ್ರೆಸ್ ಶಾಸಕರಾಗಿದ್ದಾರೆ. ಇನ್ನು ಜೆ ಡಿ ಎಸ್ ನಲ್ಲಿ ಮಾಜಿ ಸಚಿವ ಎಚ್ ವಿಶ್ವನಾಥ್ ಪ್ರಬಲ ಆಕಾಂಕ್ಷಿಯಾಗಿದ್ದಾರೆ.  ಜೆ ಡಿ ಎಸ್ ಕೋಟಾದಲ್ಲಿ ಸಚಿವ ಸ್ಥಾನ  ಹೆಚ್.ವಿಶ್ವನಾಥ್ ಅವರಿಗೆ ಸಿಗಲಿದೆಯಾ? ಜೆ ಡಿ ಎಸ್ ರಾಜ್ಯಾಧ್ಯಕ್ಷ ರಾಜೀನಾಮೆ ನಂತರ ಹಳ್ಳಿಹಕ್ಕಿ ಸಚಿವ ಸ್ಥಾನದ ಆಕಾಂಕ್ಷೆ ವ್ಯಕ್ತಪಡಿಸಿದ್ದಾರೆ. ಎಚ್ ವಿಶ್ವನಾಥ್ ಅವರಿಗೆ ಜೆ ಡಿ ಎಸ್ ವರಿಷ್ಠರು ಸಚಿವ ಸ್ಥಾನ ನೀಡತ್ತಾರಾ? ಅಥವಾ ಮೈತ್ರಿ ಸರ್ಕಾರಕ್ಕೆ ಸಂಪುಟ ವಿಸ್ತರಣೆ ತಲೆ ನೋವು ಆಗಲಿದೆಯಾ ಎನ್ನುವುದನ್ನು ಕಾದು ನೋಡಬೇಕಿದೆ. ಈಗಾಗಲೇ ಸಚಿವ ಆಕಾಂಕ್ಷಿಗಳಲ್ಲಿ ಘಟಾನುಘಟಿ ಉಭಯಪಕ್ಷದ ನಾಯಕರಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: