ಪ್ರಮುಖ ಸುದ್ದಿಮೈಸೂರು

ಹೆಲ್ಮೆಟ್ ಧರಿಸದೇ ಕೆ.ಆರ್.ನಗರದಲ್ಲಿ ಆಪ್ತನ ಹೊಸ ಜಾವಾ ಬೈಕ್ ಓಡಿಸಿದ ಸಚಿವ ಸಾ.ರಾ.ಮಹೇಶ್ : ವೀಡಿಯೋ ವೈರಲ್

ಮೈಸೂರು,ಜೂ.13:- ಕೆ.ಆರ್.ನಗರದಲ್ಲಿ ಸಚಿವ ಸಾ.ರಾ.ಮಹೇಶ್ ಆಪ್ತನ ಹೊಸ ಬೈಕ್ ಓಡಿಸಿದ್ದಾರೆ. ಸಚಿವರ ಜಾವಾ ಜಾಲಿ ರೈಡ್’ಗೆ   ಪೊಲೀಸರ ಎಸ್ಕಾರ್ಟ್ ವಾಹನ ಸಾತ್ ನೀಡಿದೆ.

ಮೈಸೂರಿನಲ್ಲಿಂದು ಮಾಜಿ ಸಿಎಂ ಸಿದ್ದರಾಮಯ್ಯ ಬೆಳಿಗ್ಗೆ  ಉಪಹಾರ ಸೇವಿಸಲು ಮೈಸೂರು ರಿಫ್ರೆಶ್ಮೆಂಟ್ ಕಡೆ  ಹೊರಟರೆ ಅವರಿಗೂ ಪೊಲೀಸರ ಎಸ್ಕಾರ್ಟ್ ವಾಹನವೇ ಸಾಥ್ ನೀಡಿದೆ.

ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್ ಅವರು ಬೆಂಗಾವಲು ವಾಹನ ಸಮೇತ ಜಾವಾ ಬೈಕ್ ನ್ನು ಹೆಲ್ಮೆಟ್ ಇಲ್ಲದೇ   ಓಡಿಸಿದ್ದು, ವೀಡಿಯೋ ವೈರಲ್ ಆಗಿದೆ.

ಮೈಸೂರು ರಿಫ್ರೆಶ್ಮೆಂಟ್ ಹೋಟೆಲ್ ನಲ್ಲಿ ಸಿದ್ದರಾಮಯ್ಯ ಉಪಹಾರ ಸೇವಿಸಿದರು. ಆದರೆ ಇವರ ಜತೆಯಲ್ಲೇ ಎಸ್ಕಾರ್ಟ್ ವಾಹನ ಸಾಗಿದ್ದು, ಸಾರ್ವಜನಿಕರಿಗೆ ಸುಗಮ ಸಂಚಾರದ ಹೆಸರಲ್ಲಿ ಪೊಲೀಸರು ಕಿರಿಕಿರಿ ಮಾಡಿದ್ದು ಅಸಮಾಧಾನಕ್ಕೆ ಕಾರಣವಾಯಿತು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: