ಪ್ರಮುಖ ಸುದ್ದಿಮೈಸೂರು

ಜೂ.20ರಂದು ಸಾಮೂಹಿಕ ಉಪನಯನ : ಆಹ್ವಾನ

ಮೈಸೂರು,ಜೂ.13 : ಸಾಧನಹಳ್ಳಿಯ ಶ್ರೀ ಸಪ್ತರ್ಷಿ ವೈದಿಕ ಗುರುಕುಲಸೇವಾಶ್ರಮ ಟ್ರಸ್ಟ್ ವತಿಯಿಂದ ತ್ರಿಮತಸ್ಥ ಬ್ರಾಹ್ಮಣ ವಟುಗಳ ಸಾಮೂಹಿಕ ಉಪನಯನ ಹಮ್ಮಿಕೊಳ್ಳಲಾಗಿದೆ ಎಂದು ಪ್ರಾಧ್ಯಾಪಕ ಹಾಗೂ ಉಪನಯನ ಸಮಿತಿ ಸದಸ್ಯ ಎಸ್.ಕೃಷ್ಣಮೂರ್ತಿ ತಿಳಿಸಿದರು.

ಗುರುವಾರ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಕಳೆದ ಮೂವತ್ತು ವರ್ಷಗಳಿಂದ ಮಠದ ವತಿಯಿಂದ ಬಡ, ನಿರ್ಗತಿಕ, ಅನಾಥ, ಅಂಗವಿಕಲ ಮಕ್ಕಳಿಗೆ ಅನ್ನದಾನ, ವಿದ್ಯಾದಾನ ಮಾಡಿಕೊಂಡು ಬರಲಾಗುತ್ತಿದ್ದು, ಈ ನಿಟ್ಟಿನಲ್ಲಿ  ಜೂ.20ರಂದು ಬೆಳಗ್ಗೆ 12 ಗಂಟೆಗೆ ಶ್ರೀ ಅಭಿನವ ರಾಮಾನುಜಾಚಾರ್ಯರು ಕಾರ್ಯಕ್ರಮ ನೇತೃತ್ವದಲ್ಲಿ ಉಪನಯನ ಹಾಗೂ ಸಮಾಶ್ರಯಣ ಹಾಗೂ ಸಾಮೂಹಿಕ ಗಾಯತ್ರಿ ಮಂತ್ರ ಉಪದೇಶ ನಡೆಸಲಾಗುವುದು ಎಂದು ಹೇಳಿದರು.

ವಿಶ್ವ ಯೋಗ ದಿನಾಚರಣೆ ಅಂಗವಾಗಿ ದಿ.21ರಂದು ಬೆಳಗ್ಗೆ 6 ಗಂಟೆಗೆ ಮಠದ ಆವರಣದಲ್ಲಿ ಯೋಗಾ ದಿನಾಚರಣೆಯನ್ನು ನಡೆಸಲಾಗುತ್ತಿದೆ, ಆಸಕ್ತರು ಮೊ.ಸಂ. 9481319111, 9342112477 ಅನ್ನು ಸಂಪರ್ಕಿಸಬಹುದಾಗಿದೆ.

ಟ್ರಸ್ಟ್ ಅಧ್ಯಕ್ಷೆ ವೀಣಾ, ಗೋಪಾಲಕೃಷ್ಣ, ಪದ್ಮನಾಭ, ನಾಗೇಂದ್ರ, ಗಾಯತ್ರಿ ಮೊದಲಾದವರು ಹಾಜರಿದ್ದರು. (ವರದಿ : ಕೆ.ಎಂ.ಆರ್)

Leave a Reply

comments

Related Articles

error: