ದೇಶಮನರಂಜನೆ

ಕಾರು ಅಪಘಾತ: ತೆಲುಗು ನಟ ವರುಣ್ ತೇಜ್ ಪಾರು

ಹೈದರಾಬಾದ್,ಜೂ.13-ತೆಲುಗು ನಟ ವರುಣ್ ತೇಜ್ ಅವರಿದ್ದ ಕಾರು ಅಪಘಾತಕ್ಕೀಡಾಗಿದ್ದು, ಅದೃಷ್ಟವಶಾತ್ ವರುಣ್ ಅಪಾಯದಿಂದ ಪಾರಾಗಿದ್ದಾರೆ.

ವನಪರ್ತಿ ಜಿಲ್ಲೆ ಕೊತ್ತಕೋಟದ ರಾಯನಿಪೇಟ್ ಸಮೀಪ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಕಾರು ಮಾತ್ರ ಜಖಂಗೊಂಡಿದ್ದು, ತನಗೆ ಯಾವುದೇ ಗಾಯಗಳಾಗಿಲ್ಲ. ತಾನು ಸುರಕ್ಷಿತವಾಗಿದ್ದೇನೆ ಎಂದು ವರಣ್ ತಿಳಿಸಿದ್ದಾರೆ.

‘ವಾಲ್ಮೀಕಿ’ ಶೂಟಿಂಗ್ ನಿಮಿತ್ತ ಹೈದರಾಬಾದಿನಿಂದ ಬೆಂಗಳೂರಿಗೆ ಪ್ರಯಾಣಿಸುತ್ತಿರಬೇಕಾದರೆ ಈ ಅಪಘಾತ ಸಂಭವಿಸಿದೆ. ಯುವಕರು ಪ್ರಯಾಣಿಸುತ್ತಿದ್ದ ಕಾರು ವರುಣ್ ಕಾರಿಗೆ ಡಿಕ್ಕಿ ಹೊಡೆದಿದೆ. ತಕ್ಷಣ ಕಾರಿನಲ್ಲಿನ ಏರ್‌ಬ್ಯಾಗ್ ಓಪನ್ ಆಗಿದ್ದು ಅಪಾಯದಿಂದ ಪಾರಾಗಿದ್ದಾರೆ. ವರುಣ್‌ ಕಾರಿಗೆ ಡಿಕ್ಕಿ ಹೊಡೆದಿರುವ ಕಾರಿನಲ್ಲಿದ್ದ ಯುವಕರ ಮದ್ಯದ ನಶೆಯಲ್ಲಿದ್ದರು ಎನ್ನಲಾಗಿದೆ.

ಈ ಬಗ್ಗೆ ವರುಣ್ ಟ್ವಿಟ್ ಮಾಡಿದ್ದು, ನನ್ನ ಕಾರು ಅಪಘಾತಕ್ಕೆ ಒಳಗಾಗಿದೆ. ಅದೃಷ್ಟವಶಾತ್ ಬದುಕಿದ್ದೇನೆ. ಈ ಅಪಘಾತದಲ್ಲಿ ಯಾರಿಗೂ ಯಾವುದೇ ರೀತಿಯ ಗಾಯಗಳು ಆಗಿಲ್ಲ. ನನ್ನ ಮೇಲೆ ತೋರಿದ ಪ್ರೀತಿ, ಕಾಳಜಿಗೆ ಧನ್ಯವಾದಗಳು ಎಂದಿದ್ದಾರೆ. (ಎಂ.ಎನ್)

Leave a Reply

comments

Related Articles

error: