ಮೈಸೂರು

ಹೃದಯಾಘಾತದಿಂದ ಅಂಗನವಾಡಿ ಶಿಕ್ಷಕಿ ಸಾವು; ಮಾನಸಿಕ ಒತ್ತಡ ವಿರೋಧಿಸಿ ಪ್ರತಿಭಟನೆ

ಬೈಲಕುಪ್ಪೆ: ಅಂಗನವಾಡಿ ಶಿಕ್ಷಕಿ ಸಾವಿಗೆ ಮಾನಸಿಕ ಒತ್ತಡ ಕಾರಣ ಎಂದು ಆರೋಪಿಸಿ ಅಂಗನವಾಡಿ ಸಂಘಟನೆಯ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು.

ಪಿರಿಯಾಪಟ್ಟಣ ತಾಲೂಕಿನ ಲಿಂಗಾಪುರ ಗ್ರಾಮದಲ್ಲಿ ಅಂಗನವಾಡಿ ಕೇಂದ್ರದಲ್ಲಿ ಅಂಗನವಾಡಿ ಶಿಕ್ಷಕಿಯಾಗಿ ಕೆಲಸ ನಿರ್ವಹಿಸುತ್ತಿದ್ದ ಚಂದ್ರವತಿ (42) ಎಂಬುವರು ಹೃದಾಯಾಘಾತದಿಂದ ಮೃತಪಟ್ಟಿದ್ದರು. ಕೆಲವು ದಿನಗಳ ಹಿಂದೆ ಕೆಲಸ ನಿರ್ವಹಿಸುತ್ತಿದ್ದ ವೇಳೆ ಲಿಂಗಾಪುರ ಗ್ರಾಮದ ಗ್ರಾಮಸ್ಥರು ಚಂದ್ರವತಿ ಸರಿಯಾಗಿ ಕೆಲಸ ನಿರ್ವಹಿಸುತ್ತಿಲ್ಲ ಎಂದು ಆರೋಪಿಸಿ ಸಿಡಿಪಿಒಗೆ ದೂರು ನೀಡಿದ್ದರು. ಈ ದೂರು ಆಧರಿಸಿ ಸಿಡಿಪಿಒ ಚಂದ್ರವತಿ ಅವರಿಗೆ ನೋಟಿಸ್ ಜಾರಿ ಮಾಡಿದ್ದರು. ಇದರಿಂದ ಮನನೊಂದು ಕೆಲದಿನಗಳ ಹಿಂದೆ ಅನಾರೋಗ್ಯಕ್ಕೆ ತುತ್ತಾಗಿದ್ದ ಚಂದ್ರವತಿ ಫೆ.8ರ ಬುಧವಾರ ರಾತ್ರಿ ಹೃದಯಾಘಾತದಿಂದ ಸಾವಿಗೀಡಾಗಿದ್ದಾರೆ ಎಂದು ಮೃತರ ಮಕ್ಕಳು ಆರೋಪಿಸಿದ್ದಾರೆ.

ಚಂದ್ರವತಿ, ಮೃತಪಟ್ಟ ಅಂಗನವಾಡಿ ಶಿಕ್ಷಕಿ.

ಚಂದ್ರವತಿ ನಿಧನದಿಂದ ತಾಲೂಕಿನಾದ್ಯಂತ ಅಂಗನವಾಡಿಗಳನ್ನುಮುಚ್ಚಿ ಎಲ್ಲ ಅಂಗನವಾಡಿ ಶಿಕ್ಷಕಿಯರು ಮತ್ತು ಕಾರ್ಯಕರ್ತರು ಲಿಂಗಾಪುರದಲ್ಲಿ ಜಮಾಯಿಸಿದರು. ಈ ವೇಳೆ ಸ್ಥಳಕ್ಕೆ ಆಗಮಿಸಿದ ಸಿಡಿಪಿಒ ಇಂದಿರಾ ಮತ್ತು ಮೇಲ್ವಿಚಾರಕಿ ಶ್ವೇತಾರನ್ನು ತರಾಟೆಗೆ ತೆಗೆದುಕೊಂಡು ಸಂಘದ ಸದಸ್ಯರು ಗ್ರಾಮಸ್ಥರ ದೂರನ್ನು ಸ್ಥಳಕ್ಕೆ ಆಗಮಿಸಿ ಪರಿಶೀಲಿಸದೆ ಏಕಾಏಕಿ ನೋಟೀಸ್ ಜಾರಿ ಮಾಡಿರುವುದು ಆಕೆಯ ಆರೋಗ್ಯದ ಮೇಲೆ ಪರಿಣಾಮ ಬೀರಿದೆ. ಈ ಮಾಸಿಕ ಆಘಾತದಿಂದ ಸಾವು ಸಂಭವಿಸಿದೆ ಎಂದು ಆರೋಪಿಸಿದರು.

ಮೃತ ಚಂದ್ರವತಿ ಮಗಳಿಗೆ ಉದ್ಯೋಗ ಕೊಡಿಸುವುದಾಗಿ ಭರವಸೆ ನೀಡುವವರೆಗೆ ಶರೀರವನ್ನು ಅಂತ್ಯಸಂಸ್ಕಾರಕ್ಕೆ ಅನುವು ಮಾಡಿಕೊಡುವುದಿಲ್ಲ ಎಂದು ಅಂಗನವಾಡಿ ಶಿಕ್ಷಕಿಯರು ಪಟ್ಟುಹಿಡಿದರು. ಕೊನೆಗೆ ಸಿಡಿಪಿಒ ಇಂದಿರಾ ಅವರು ಈ ಕುರಿತು ಲಿಖಿತ ಭರವಸೆ ನೀಡಲು ಬರುವುದಿಲ್ಲ. ಬದಲಾಗಿ ಚಂದ್ರವತಿ ಕುಟುಂಬಕ್ಕೆ ಅನುಕೂಲವಾಗುವ ರೀತಿಯಲ್ಲಿ ವರದಿಯನ್ನು ಸರಕಾರಕ್ಕೆ ನೀಡುವುದಾಗಿ ಭರವಸೆ ನೀಡಿದ ಮೇರೆಗೆ ಅಂತ್ಯಸಂಸ್ಕಾರಕ್ಕೆ ಮುಂದಾದರು.

ಈ ಸಂದರ್ಭ ಅಂಗನವಾಡಿ ಶಿಕ್ಷಕಿಯರ ಸಂಘದ ಅಧ್ಯಕ್ಷೆ ಕಾವೇರಮ್ಮ, ಕಾರ್ಯದರ್ಶಿ ರಾಜಾಮಣಿ ಸೇರಿದಂತೆ ನೂರಾರು ಕಾರ್ಯಕರ್ತೆಯರು ಹಾಜರಿದ್ದರು.

ಕೆಲ ವರ್ಷಗಳ ಹಿಂದೆ ತಂದೆ ರಸ್ತೆ ಅಪಘಾತದಲ್ಲಿ ತೀರಕೊಂಡಿದ್ದು ಇದೀಗ ಇದ್ದ ಒಬ್ಬ ಅಮ್ಮನನ್ನು ಕಳೆದುಕೊಂಡ ಡೀನಾ ಮತ್ತು ಯಕ್ಷಿತ್ ಅನಾಥರಾಗಿದ್ದಾರೆ.

Leave a Reply

comments

Related Articles

error: