ಮೈಸೂರು

ದಿ.17ರಂದು ವಿದುಷಿ ಭಾರ್ಗವಿ ವೆಂಕಟರಾಂ ರಿಂದ ಬೆಳದಿಂಗಳ ಸಂಗೀತ ಕಛೇರಿ

ಮೈಸೂರು,ಜೂ.13 : ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ಸುತ್ತೂರು ಶಾಖಾ ಮಠದಲ್ಲಿ ದಿ.17ರಂದು ಸಂಜೆ 6 ಗಂಟೆಗೆ ಬೆಳದಿಂಗಳ ಸಂಗೀತ ಕಾರ್ಯಕ್ರಮದಲ್ಲಿ ವಿದುಷಿ ಭಾರ್ಗವಿ ವೆಂಕಟರಾಂ ಅವರಿಂದ ಸಂಗೀತ ಕಛೇರಿಯನ್ನು ಏರ್ಪಡಿಸಲಾಗಿದೆ.

ಪರಿಚಯ : ವಿದುಷಿ ಭಾರ್ಗವಿ ವೆಂಕಟರಾಂ ಅವರು ಹಿರಿಯ ಕಲಾವಿದರಾದ ವಿದುಷಿ ತ್ರಿವೇಣಿ ಸರಳಾಯರವರ ಮಕ್ಕಳು, ಎರಡನೇಯ ವರ್ಷದ್ಲಲಿಯೇ ರಾಗಗಳನ್ನು ಗುರುತಿಸುವ ಸ್ವರಜ್ಞಾನವನ್ನು ಹೊಂದಿದ ಇವರಿಗೆ ತಂದೆ-ತಾಯಿ ಹಾಗೂ ಚಿಕ್ಕಮ್ಮ ವಿದುಷಿ ಕವಿತಾ ಸರಳಾಯರ ಬಳಿ ಪ್ರಾಥಮಿಕ ಸಂಗೀತಾಭ್ಯಾಸ, ಪ್ರಸ್ತುತ ಚೆನ್ನೈನ ಖ್ಯಾತ ಸಂಗೀತಗಾರ ವಿದ್ವಾನ್ ಟಿ.ಎಂ. ಕೃಷ್ಣನ್ ರವರ ಬಳಿ ಉನ್ನತ ಶಿಕ್ಷಣ, ರಾಷ್ಟ್ರಮಟ್ಟದಲ್ಲಿ ಸಂಗೀತ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದಿದ್ದಾರೆ.

ರಾಜ್ಯ ಸರ್ಕಾರದ ಕಿಶೋರ ಪ್ರತಿಭೆ ಪುರಸ್ಕಾರ ಸ್ಪರ್ಧೆಯಲ್ಲಿ ಐಟಿಸಿ ಸಂಗೀತ ಸಂಶೋಧನಾ ಸಂಸ್ಥೆಯ ಮುದರಾಸು, ಮುಂಬಯಿ ಮೊದಲಾದ ಕಡೆಗಳಲ್ಲಿ ಸಂಗೀತ ಪ್ರಶಸ್ತಿ ಪಡೆದಿರುವರು.

ಬೆಂಗಳೂರು, ಮದರಾಸು, ಮುಂಬಯಿ ಮೊದಲಾದ ಕಡೆಗಳಲ್ಲಿ ಸಂಗೀತ ಕಚೇರಿಗಳನ್ನು ನೀಡಿ ಕಲಾ ರಸಿಕರನ್ನು ವಿಮರ್ಶಕರನ್ನು ರಂಜಿಸಿರುವರು, ಅಖಿಲ ಭಾರತ ಆಕಾಶವಾಣಿಯ ‘ಬಿ’ಶ್ರೇಣಿಯ ಕಲಾವಿದರಾಗಿರುವರು.

ಇವರಿಗೆ ಮಾಸ್ಟರ್ ಸಮಂತ್ ಮಂಜುನಾಥ್ ವಯೋಲಿನ್ ನಲ್ಲಿ , ಮಾಸ್ಟರ್ ಅಕ್ಷಯ್ ಆನಂದ್ ಮೃದಂಗದಲ್ಲಿ ಸಾಥ್ ನೀಡಲಿರುವರು. (ಕೆ.ಎಂ.ಆರ್)

Leave a Reply

comments

Related Articles

error: