ಕರ್ನಾಟಕಪ್ರಮುಖ ಸುದ್ದಿ

ಒಕ್ಕಲಿಗರ ಸಂಘದ ಬಿಕ್ಟಟ್ಟು: ಡಿಕೆಶಿ ನೇತೃತ್ವದಲ್ಲಿ ಪ್ರಾಥಮಿಕ ಸಮಾಲೋಚನೆ

ರಾಜ್ಯ ಒಕ್ಕಲಿಗರ ಸಂಘದ ನಾಯಕತ್ವ ಕುರಿತು ನಿರ್ದೇಶಕರಲ್ಲಿ ಉಂಟಾಗಿರುವ ಬಿಕ್ಕಟ್ಟನ್ನು ಬಗೆಹರಿಸಲು ಇಂಧನ ಸಚಿವ ಡಿ.ಕೆ.ಶಿವಕುಮಾರ್ ಅವರು ಇಂದು (ಗುರುವಾರ) ನಿರ್ದೇಶಕರ ಸಭೆ ನಡೆಸಿದರು. ಸಚಿವರ ಖಾಸಗಿ ನಿವಾಸದಲ್ಲಿ ನಡೆದ ಸಭೆಯಲ್ಲಿ ಸಂಘದ 32 ನಿರ್ದೇಶಕರು ಭಾಗವಹಿಸಿದ್ದರು.

“ವಿಶ್ವ ಒಕ್ಕಲಿಗರ ಜಗದ್ಗುರು ಅದಿಚುಂಚನಗಿರಿ ಮಠದ ಮಹಾಸ್ವಾಮಿಗಳಾದ ಶ್ರೀ ನಿರ್ಮಲಾನಂದ ಮಹಾಸ್ವಾಮಿಗಳ ನೇತೃತ್ವದಲ್ಲಿ ಒಕ್ಕಲಿಗ ಜನಾಂಗದ ಹಿರಿಯ ಮುಖಂಡರಾದ ಹೆಚ್.ಡಿ.ದೇವೇಗೌಡರು, ಡಿ.ಕೆ. ಶಿವಕುಮಾರ್, ಆರ್.ಅಶೋಕ್ ಹಾಗು ಇತರೆ ನಾಯಕರ ಸಮ್ಮುಖದಲ್ಲಿ ಸಭೆ ನಡೆಸಿ ತೆಗೆದುಕೊಳ್ಳುವ ಸಭೆಯ ತೀರ್ಮಾನಕ್ಕೆ ಎಲ್ಲರೂ ಬದ್ಧ”ರಾಗುವುದಾಗಿ ನಿರ್ದೇಶಕರು ಪತ್ರ ಮುಖೇನ ಸಮ್ಮತಿ ನೀಡಿದರು.

ನಿರ್ದೇಶಕರ ತೀರ್ಮಾನವನ್ನು ಸುದ್ದಿಗೋಷ್ಠಿಯಲ್ಲಿ ಪ್ರಕಟಿಸಿದ ಸಚಿವ ಡಿ.ಕೆ. ಶಿವಕುಮಾರ್ ಅವರು, ಒಕ್ಕಲಿಗರ ಪ್ರಾತಿನಿಧಿಕ ಸಂಸ್ಥೆಯಾದ ಒಕ್ಕಲಿಗರ ಸಂಘದಲ್ಲಿ ನಡೆಯುತ್ತಿರುವ ಬೆಳವಣಿಗೆಗಳಿಂದ ಸಾಮಾನ್ಯ ಒಕ್ಕಲಿಗರು ನೊಂದಿರುತ್ತಾರೆ‌‌. ಬಿಕ್ಕಟ್ಟನ್ನು ಬಗೆಹರಿಸುವಂತೆ ನಮಗೆ ಮನವಿ ಮಾಡಿಕೊಂಡರು. ಅದಕ್ಕಾಗಿ ತಾನು ಈ ಪ್ರಯತ್ನ ಮಾಡಿದ್ದಾಗಿ ತಿಳಿಸಿದರು. 36 ನಿರ್ದೇಶಕರಲ್ಲಿ 29 ನಿರ್ದೇಶಕರು ಸಭೆಯಲ್ಲಿ ಪಾಲುಗೊಂಡಿದ್ದು, ಉಳಿದ ನಿರ್ದೇಶಕರು ಸಭೆಯ ತೀರ್ಮಾನಕ್ಕೆ ಬದ್ಧರಾಗಿರುವುದಾಗಿ ತಿಳಿಸಿದ್ದಾರೆ.

ಮುಂದಿನ ಸಭೆ ನಡೆಯುವ ದಿನಾಂಕವನ್ನು ಮಹಾಸ್ವಾಮಿಗಳು, ಹಿರಿಯ ನಾಯಕರೊಂದಿಗೆ ಸಮಾಲೋಚನೆ ಮಾಡಿ ನಿಗದಿಪಡಿಸಲಾಗುವುದು. ಪ್ರಾಯಶಃ ಮುಂದಿನ ವಾರ ಸಭೆ ನಡೆಯಲಿದೆ ಎಂದು ಶಿವಕುಮಾರ್ ತಿಳಿಸಿದರು.

Leave a Reply

comments

Related Articles

error: