ಮೈಸೂರು

ಪಾಲಿಕೆ ಸದಸ್ಯನ ಮೇಲೆ ಹಲ್ಲೆಗೆ ಯತ್ನ

ಮೈಸೂರು ನಗರಪಾಲಿಕೆ ಸದಸ್ಯನ ಮೇಲೆ ಹಲ್ಲೆಗೆ ಯತ್ನ ನಡೆಸಿದ ಘಟನೆ ಮೈಸೂರಿನ ಅರಸು ರಸ್ತೆಯಲ್ಲಿ ನಡೆದಿದೆ.

ಮೈಸೂರು ಮಹಾನಗರಪಾಲಿಕೆ ಸದಸ್ಯ ಹಾಗೂ ಬಾಬುಲಾಲ್ ಗುಂಪಿನ ನಡುವೆ ಮಾತಿನ ಚಕಮಕಿ ನಡೆದಿದ್ದು, ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣಗೊಂಡಿತ್ತು.
ತ್ರಿಪುರ ಭೈರವಿ ಮಠದ ಆಸ್ತಿಗೆ  ಬಾಬುಲಾಲ್ ಕಂಪೌಂಡ್ ನಿರ್ಮಿಸಿದ್ದು, ಇದನ್ನು ಮಹಾನಗರಪಾಲಿಕೆ ಸದಸ್ಯರು ಅಧಿಕಾರಿಗಳ ಮೂಲಕ ತೆರವುಗೊಳಿಸಲು ಸೂಚನೆ ನೀಡಿದ್ದು, ಅದರಂತೆ ತೆರವುಗೊಳಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಬಾಬುಲಾಲ್ , ಬೂಡಾರಾಮ್ ಕುಟುಂಬ ಪಾಲಿಕೆ ಸದಸ್ಯರು  ಪ್ರಶಾಂತ್ ಗೌಡರಿಗೆ ಕೊಲೆ ಬೆದರಿಕೆ ಹಾಕಿದ್ದರು ಎನ್ನಲಾಗಿದೆ.   ಗುರುವಾರ ರಾತ್ರಿ ಪಾಲಿಕೆ ಸದಸ್ಯ ಮತ್ತು ಬಾಬೂಲಾಲ್ ಗುಂಪಿನ ನಡುವೆ ಮಾತಿನ ಚಕಮಕಿ ನಡೆದಿದ್ದು, ಉದ್ವಿಗ್ನ ಪರಿಸ್ಥಿತಿ ನಿರ್ಮಾಣಗೊಂಡಿತ್ತು. ಪರಿಸ್ಥಿತಿ ನಿಯಂತ್ರಿಸಲು ಪೊಲೀಸರಿಂದ ಲಾಠಿ ಚಾರ್ಜ್ ನಡೆಸಿದರು.
ದೇವರಾಜ ಠಾಣೆಗೆ ಪ್ರಶಾಂತ್ ಗೌಡ ದೂರು ನೀಡಿದ್ದರು.

Leave a Reply

comments

Related Articles

error: