ಮೈಸೂರು

ದರ್ಗಾಹಿ ಮಸೀದಿಯಲ್ಲಿ ನೂತನವಾಗಿ ವಧು ಖಾನಾ ನಿರ್ಮಾಣಕ್ಕಾಗಿ ಶಿಲಾನ್ಯಾಸ

ಮೈಸೂರು,ಜೂ.14:- ದರ್ಗಾಹಿ ಮಸೀದಿ ಅಹಲೆ ಸುನ್ನತೋ ಜಮಾತ್ ವ್ಯವಸ್ಥಾಪಕ ಸಮಿತಿ ಪದಾಧಿಕಾರಿಗಳಿಂದ ದರ್ಗಾಹಿ ಮಸೀದಿ ಅಹಲೆ ಸುನ್ನತೋ ಜಮಾತ್, ಸಾಡೇ ರಸ್ತೆ, ಮಂಡಿ ಮೊಹಲ್ಲಾ, ಮೈಸೂರು ಇಲ್ಲಿನ ಮುಖ್ಯ ದ್ವಾರದ ಎಡಭಾಗದಲ್ಲಿರುವ 11’ x 46’ ಅಳತೆಯ ಖಾಲಿ ನಿವೇಶನದಲ್ಲಿ,  8 ಲಕ್ಷರೂ.ಗಳ ಅಂದಾಜು ವೆಚ್ಚದಲ್ಲಿ ವಧು ಖಾನಾವನ್ನು, ಮೊದಲನೇ ಅಂತಸ್ತಿನಲ್ಲಿ 10×10 ಅಳತೆಯ 4 ರೂಮುಗಳನ್ನು ನಿರ್ಮಿಸಲಾಗುತ್ತಿದೆ.

ಈ ಸಂಬಂಧ ನಿನ್ನೆ  ಮೈಸೂರಿನ ಸರ್‍ಖಾಜಿಯವರಾದ ಹಜರತ್ ಮೌಲಾನಾ ಮೊಹಮ್ಮದ್ ಉಸ್ಮಾನ್ ಷರೀಫ್ ಸಾಹೆಬ್, ಹಜರತ್ ಮೌಲಾನಾ ಮೊಹಮ್ಮದ್ ಅನ್ವರ್ ಅಹಮದ್ ನಿಜಾಮಿ ಅಶ್ರಫಿ, ಮುಖ್ಯ ಪ್ರವರ್ತಕರು, ದಾರುಲ್ ಉಲೂಮ್ ಅಜೀಜಿಯಾ ಅರೇಬಿಕ್ ಕಾಲೇಜು, ಮಾಂಬಳ್ಳಿ, ಹಜರತ್ ಮೌಲಾನಾ ಮೊಹಮ್ಮದ್ ಶಂಶುಲ್ ಹುದಾ ಚಿಸ್ಟಿ ಸಾಹೆಬ್, ಖಾಜಿ ಇದಾರೆ ಷರಿಯಾ ಮಸೀದಿ ಆಜಮ್, ಮೌಲಾನಾ ಅಬ್ದುಲ್ ಸಲಾಂ ರಜ್ವಿ, ಉಪಾಧ್ಯಕ್ಷರು, ದರ್ಗಾಹಿ ಮಸೀದಿ ವ್ಯವಸ್ಥಾಪಕ ಸಮಿತಿ, ಮೌಲಾನಾ ಮೊಹಮ್ಮದ್ ಸಲ್ಮಾನ್ ಖಾದ್ರಿ ಸಾಹೆಬ್, ಇಮಾಮ್ ಮಸೀದಿ ದರ್ಗಾಹಿ, ಮೌಲಾನಾ ಹಾಫಿಜ್ ಅಬ್ದುಲ್ ಹನನ್ ನಕಶ್‍ಬಂದಿ, ಮಾಜಿ ಇಮಾಮ್, ಈದಿಗಾ ಮಸೀದಿ ಮತ್ತು ಇತರರ ಸಮ್ಮುಖದಲ್ಲಿ ಖುರಾನ್ ಫಠಣೆ ಮಾಡಿ, ಫತಾಖಾನಿ ಮತ್ತು ದುವಾ ನೆರವೇರಿಸಲಾಯಿತು. ಆನಂತರ ಮೈಸೂರು ಜಿಲ್ಲಾ ವಕ್ಫ್ ಬೋಡ್ ಸಲಹಾ ಸಮಿತಿ ಅಧ್ಯಕ್ಷರಾದ   ಆರಿಫ್ ಮೇಕ್ರಿ   ಗುದ್ದಲಿ ಪೂಜೆ ಮಾಡಿ ಶಿಲಾನ್ಯಾಸ ನೆರವೇರಿಸಿದರು. ವಕ್ಫ್ ಬೋಡ್ ಸಲಹಾ ಸಮಿತಿ ಉಪಾಧ್ಯಕ್ಷರಾದ   ಜಮೀಲ್ ಅಹಮದ್ ಅಶ್ರಫಿ, ಸದಸ್ಯರು,   ಮುದಸ್ಸಿರ್ ಆಲಿ ಖಾನ್ ವಕೀಲರು, ಮಸೀದಿ ವ್ಯವಸ್ಥಾಪಕ ಸಮಿತಿ   ಷಫಿ ಉಲ್ಲಾ ಬೇಗ್ ಖಾದ್ರಿ  ಸರ್‍ಖಾಜಿಯವರನ್ನು ಮತ್ತು   ಆರಿಫ್ ಮೇಕ್ರಿ ಮತ್ತು ಇತರರನ್ನು ಸನ್ಮಾನಿಸಿದರು.

ಈ ಸಂದರ್ಭದಲ್ಲಿ   ಸೈಯದ್ ಯೂನುಸ್, ಕಾರ್ಯದರ್ಶಿ, ಜಾಮಿಯಾ ಟಿಪ್ಪು ಅರೇಬಿಕ್ ಕಾಲೇಜು, ಶ್ರೀರಂಗಪಟ್ಟಣ, ಶ್ರೀ ಆಶ್ವಾಕ್ ಅಹಮದ್, ಮಸೀದಿ ಅಕ್ಸಾ,   ಅಬ್ದುಲ್ ಸತ್ತಾರ್ (ಎಜೆಬಿ) ಸದಸ್ಯರು, ದರ್ಗಾಹಿ ಮಸೀದಿ, ಸಮಾಜ ಸೇವಕರಾದ  ಮಿರ್ಜಾ ಜಂಷೀದ್ ಬೇಗ್ ಅಶ್ರಫಿ,   ಕಲೀಂ ಪಾಷ, ಕಾರ್ಯದರ್ಶಿ, ಖಾದ್ರಿಯಾ ಮಸೀದಿ ಮತ್ತು ಇತರರು ಉಪಸ್ಥಿತರಿದ್ದರು. ಮೌಲಾನಾ ಅಬ್ದುಲ್ ಸಲಾಂ ರಜ್ವಿ, ಉಪಾಧ್ಯಕ್ಷರು ವಂದನಾರ್ಪಣೆ ಸಲ್ಲಿಸಿದರು. ನಂತರ ತಬ್ರುಕ್ ವಿತರಿಸಲಾಯಿತು.

Leave a Reply

comments

Related Articles

error: