ಪ್ರಮುಖ ಸುದ್ದಿಮೈಸೂರು

ಜೂ.16ರಂದು ಆಚಾರ್ಯತ್ರಯ ಜಯಂತಿ

ಬೆಳಗ್ಗೆ 8.30 ರಿಂದ ಚಾಮುಂಡಿಪುರಂ ವೃತ್ತದಿಂದ ಶೋಭಾಯಾತ್ರೆ

ಮೈಸೂರು,ಜೂ.14 : ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘ ಹಾಗೂ ಎ.ಕೆ.ಬಿ.ಎಂ.ಎಸ್, ಮೈಸೂರು ವಲಯ ಜಂಟಿಯಾಗಿ ಆಚಾರ್ಯತ್ರಯರ ಜಯಂತಿಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷ ಡಿ.ಟಿ.ಪ್ರಕಾಶ್ ತಿಳಿಸಿದರು.

ಶುಕ್ರವಾರ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ನ್ಯೂಕಾಂತರಾಜ್ ಅರಸ್ ರಸ್ತೆಯ ನೇರಂಬಳ್ಳಿ ಸಾವಿತ್ರಮ್ಮ ಸುಬ್ಬರಾಯ ಕಲ್ಯಾಣ ಮಂಟಪದಲ್ಲಿ ಜೂ.16ರ ಬೆಳಗ್ಗೆ 10ಯಿಂದ ನಡೆಯುವ ಕಾರ್ಯಕ್ರಮವನ್ನು ಗಣಪತಿ ಸಚ್ಚಿದಾನಂದ ಆಶ್ರಮದ ಶ್ರೀ ದತ್ತ ವಿಜಯಾನಂದ ಸ್ವಾಮೀಜಿ ಉದ್ಘಾಟಿಸುವರು, ಶಾಸಕ ಎಸ್.ಎ.ರಾಮದಾಸ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ಹೆಚ್.ಚೆನ್ನಪ್ಪ, ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಹೆಚ್.ವಿ.ರಾಜೀವ್, ಮುಡಾ ಮಾಜಿ ಅಧ್ಯಕ್ಷ ಕೆ.ಆರ್. ಮೋಹನ್ ಕುಮಾರ್ ಸೇರಿದಂತೆ ಸಮಾಜದ ಗಣ್ಯರು ಹಾಜರಿರಲಿದ್ದು, ತಮ್ಮ ಅಧ್ಯಕ್ಷತೆಯಲ್ಲಿಯೇ ಕಾರ್ಯಕ್ರಮ ಜರುಗಲಿದೆ ಎಂದು ತಿಳಿಸಿದರು.

ಡಾ.ಹೆಚ್.ವಿ.ನಾಗರಾಜ ರಾವ್ ‘ಶಂಕರಾಚಾರ್ಯರ ಬಗ್ಗೆ, ಡಾ.ಶೆಲ್ವ ಪಿಳ್ಳೆ ಐಯ್ಯಂಗಾರ್ ರಾಮಾನುಜಾಚಾರ್ಯರ ಬಗ್ಗೆ ಹಾಗೂ ವಿದ್ವಾನ್ ಮುಕುಂದ ಆಚಾರ್ಯರು ಮದ್ವಾಚಾರ್ಯರ ಬಗ್ಗೆ ಉಪನ್ಯಾಸ ನೀಡಲಿದ್ದಾರೆ ಎಂದು ಹೇಳಿದರು.

ಸಮಾಜದ ಮುಖಂಡರಾದ ಡಾ.ಲಕ್ಷ್ಮೀ, ಕೃಷ್ಣದಾಸ್ ಪುರಾಣಿಕ್, ಹರೀಶ್, ವಿಕ್ರಂ ಅಯ್ಯಂಗಾರ್, ಸೌಭಾಗ್ಯಮೂರ್ತಿ, ಗೋಪಾಲರಾವ್ ಗೋಷ್ಠಿಯಲ್ಲಿ ಹಾಜರಿದ್ದರು. (ವರದಿ : ಕೆ.ಎಂ.ಆರ್)

Leave a Reply

comments

Related Articles

error: