ಮನರಂಜನೆ

ದರ್ಶನ್ ಅವರಲ್ಲಿ ಮನವಿ ಮಾಡಿದ ಥ್ರೋಬಾಲ್ ಆಟಗಾರ್ತಿ ಕೃಪಾ

ಬೆಂಗಳೂರು,ಜೂ.14-ಅಂತಾರಾಷ್ಟ್ರೀಯ ಮಟ್ಟದ ಥ್ರೋಬಾಲ್ ಆಟಗಾರ್ತಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಲ್ಲಿ ಥ್ರೋಬಾಲ್ ಆಟಗಾಗರಿಗೂ ಸಹಾಯದ ಹಸ್ತ ಚಾಚಿ ಮನವಿ ಮಾಡಿಕೊಂಡಿದ್ದಾರೆ.

ಭಾರತೀಯ ಥ್ರೋಬಾಲ್ ತಂಡದ ನಾಯಕಿ ಕೃಪಾ ಅವರು ವಿಡಿಯೋ ಮೂಲಕ ದರ್ಶನ್ ಅವರಲ್ಲಿ ಮನವಿ ಮಾಡಿದ್ದಾರೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಕಷ್ಟ ಎಂದವರ ಪಾಲಿಗೆ ಕರಗುವ ದರ್ಶನ್ ಅವರ ಸಹಾಯದ ಮನೋಭಾವ ಹಾಗೂ ಅವರ ಪ್ರಾಣಿ ಪ್ರೀತಿ ಕೃಪಾ ಅವರಿಗೆ ತುಂಬಾ ಇಷ್ಟವಾಗುತ್ತಂತೆ. ದರ್ಶನ್ ಅವರನ್ನು ಸದಾ ಫಾಲೋ ಮಾಡುತ್ತಿರುವ ಕೃಪಾ ಥ್ರೋಬಾಲ್ ಆಟಗಾಗರಿಗೂ ಸಹಾಯದ ಹಸ್ತ ಚಾಚಿ ಎಂದು ಕೇಳಿಕೊಂಡಿದ್ದಾರೆ.

ಥ್ರೋಬಾಲ್ ಆಟ ನಾನಾಕಾರಣಗಳಿಗೆ ಖ್ಯಾತಿ ಪಡೆದುಕೊಂಡಿಲ್ಲ. ಆದರೆ ರಾಜ್ಯದಲ್ಲಿ ಸಾಕಷ್ಟು ಉದಯೋನ್ಮುಖ  ಮಹಿಳಾ ಆಟಗಾಗರು ಇದ್ದಾರೆ. ಚಿಕ್ಕ ಚಿಕ್ಕ ಗ್ರಾಮಗಳಿಂದ ಬಂದಿದ್ದಾರೆ. ಅನೇಕ ಆಟಗಾರರು ಥ್ರೋಬಾಲ್ ನಲ್ಲಿ ಮುಂದೆ ಬರಲು ಪ್ರಯತ್ನಿಸುತ್ತಿರುತ್ತಾರೆ. ಆದರೆ ಥ್ರೋಬಾಲ್ ಅಷ್ಟು ಪ್ರಖ್ಯಾತಿ ಪಡಿದುಕೊಂಡಿಲ್ಲ. ಪ್ರಖ್ಯಾತಿ ಪಡೆಯದ ಥ್ರೋಬಾಲ್ ಆಟ ಖ್ಯಾತಿಗಳಿಸಬೇಕು ಅಂದರೆ ಕರ್ನಾಟಕದ ಶಕ್ತಿ ಆಗಿರುವ ದರ್ಶನ್ ಅಂತಹ ಸ್ಟಾರ್ ನಟರ ಸಹಾಯ ಬೇಕು ಎಂದಿದ್ದಾರೆ.

ದರ್ಶನ್ ಅವರು ಥ್ರೋಬಾಲ್ ಮಹಿಳಾ ತಂಡಕ್ಕೆ ಪ್ರೋತ್ಸಾಹ ನೀಡಿದರೆ ಥ್ರೋಬಾಲ್ ಆಟ ಕೂಡ ಖ್ಯಾತಿ ಗಳಿಸುತ್ತೆ. ಅನೇಕ ಕ್ರೀಡಾಪಟುಗಳಿಗೂ ಸಹಾಯವಾಗುತ್ತೆ. ದಯವಿಟ್ಟು ಸಹಾಯ ಮಾಡಿ, ಆಟವನ್ನು ಬೆಂಬಲಿಸಿ  ಎಂದು ಮನವಿ ಮಾಡಿಕೊಂಡಿದ್ದಾರೆ.

ಕರ್ನಾಟಕದವರಾದ ಆಟಗಾರ್ತಿಯಾದ ಕೃಪಾ ಸದ್ಯ ಭಾರತೀಯ ಥ್ರೋಬಾಲ್ ತಂಡದ ನಾಯಕಿಯಾಗಿದ್ದಾರೆ. ಕೃಪಾ ದರ್ಶನ್ ಅವರ ದೊಡ್ಡ ಅಭಿಮಾನಿ ಕೂಡ ಅಂತೆ. ಕೃಪಾ ಅವರ ಮನವಿಗೆ ದರ್ಶನ್ ಸ್ಪಂದಿಸುತ್ತಾರಾ ಎಂದು ಕಾದು ನೋಡಬೇಕು. (ಎಂ.ಎನ್)

Leave a Reply

comments

Related Articles

error: