
Uncategorized
ಮೈಸೂರು ವಿಮಾನ ನಿಲ್ದಾಣಕ್ಕೆ ‘ನಾಲ್ವಡಿ ಕೃಷ್ಣರಾಜ ಒಡೆಯರ್’ ಹೆಸರಿಡಲು ಆಗ್ರಹ
ಮೈಸೂರು,ಜೂ.14 : ಮೈಸೂರು ವಿಮಾನ ನಿಲ್ದಾಣಕ್ಕೆ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಹೆಸರನ್ನು ನಾಮಕರಣಗೊಳಿಸಬೇಕೆಂದು ಕದಂಬ ಸೈನ್ಯ ಕನ್ನಡ ಸಂಘಟನೆ ಆಗ್ರಹಿಸಿದೆ.
ಮೈಸೂರು ಸಂಸ್ಥಾನದ ಸರ್ವಾಂಗೀಣಾಭಿವೃದ್ದಿಗೆ ಒಡೆಯರ್ ಕಾರಣೀಭೂತರಾಗಿದ್ದಾರೆ, ಪಾರಂಪರಿಕ ನಗರಿ ನಿರ್ಮಾತೃಗಳು, ವಿದ್ಯಾದಾತ, ವೈದ್ಯ ಸಹಾಯಕ ಗ್ರಾಮ ನಿರ್ಮಲೀಕರಣ, ವಾಣಿ ವಿಲಾಸ ಸಾಗರ, ಹೀರೆ ಬಾಸ್ಕರ್ ಅಣೆಕಟ್ಟು, ಕೃಷ್ಣರಾಜ ಅಣೆಕಟ್ಟು, ಶಿವನ ಸಮುದ್ರದಲ್ಲಿ ವಿದ್ಯುತ್ ಕೇಂದ್ರ, ಕೈಗಾರಿಕಾ ಅಭಿವೃದ್ಧಿಗಳು, ವಿದ್ಯಾ ಸಂಸ್ಥೆಗಳು, ಆಸ್ಪತ್ರೆಗಳು ಮುಂತಾದವುಗಳ ನಿರ್ಮಿಸಿದ್ದಲ್ಲದೇ, ಸಾಮಾಜಿಕ ಪಿಡುಗುಗಳನ್ನು ತೊಲಗಿಸಲು ಶ್ರಮಿಸಿದ್ದರು.
ಭಾರತದಲ್ಲಿ ಯಾವ ಸಂಸ್ಥಾನವೂ ಅಭಿವೃದ್ಧಿ ಕಾಣದಷ್ಟು ಮೈಸೂರು ಸಂಸ್ಥಾನ ಅಭಿವೃದ್ಧಿಯಾಗಿತ್ತು ಹಾಗೂ ರಾಷ್ಟ್ರಪತಿ ಮಹಾತ್ಮ ಗಾಂಧಿಯವರಿಂದಲೇ ರಾಜರ್ಷಿ ಎಂಬ ಪ್ರಶಂಸೆಗೆ ಒಳಗಾಗಿದ್ದರು, ಆದ್ದರಿಂದ ಇಂತಹ ನಾಡು ಕಂಡ ಅಪ್ರತಿಮಾ ಮಹನೀಯರ ಹೆಸರನ್ನು ವಿಮಾನ ನಿಲ್ದಾಣಕ್ಕೆ ನಾಮಕರಣಗೊಳಿಸಬೇಕೆಂದು ಜಿಲ್ಲಾಧ್ಯಕ್ಷ ಎ.ನಾಗೇಂದ್ರ, ಸಂಚಾಲಕ ನ್.ವೆಂಕಟೇಶ್ ಪತ್ರಿಕಾ ಹೇಳಿಕೆಯಲ್ಲಿ ಒತ್ತಾಯಿಸಿ ಸಂಸದರಿಗೆ ಹಾಗೂ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ. (ಕೆ.ಎಂ.ಆರ್)