ಸುದ್ದಿ ಸಂಕ್ಷಿಪ್ತ
ಜೆಎಸ್ಎಸ್ ಪ್ರೌಢಶಾಲೆಯ ಪ್ರತಿಭಾ ಪುರಸ್ಕಾರ ನಾಳೆ
ಮೈಸೂರು,ಜೂ.14 : ರಾಜಕುಮಾರ್ ರಸ್ತೆಯಿಂದ ಜೆಎಸ್ಎಸ್ ಪ್ರೌಢಶಾಲೆ, ಹಿರಣ್ಮಯಿ ಪ್ರತಿಷ್ಠಾನ ಮತ್ತು ಕಾವೇರಿ ಬಳಗದಿಂದ ಪ್ರತಿಭಾ ಪುರಸ್ಕಾರವನ್ನು ಜೂ.15ರ ಬೆಳಗ್ಗೆ 10 ಗಂಟೆಗೆ ಶಾಲಾ ಆವರಣದಲ್ಲಿ ಏರ್ಪಡಿಸಲಾಗಿದೆ.
ಮುಖ್ಯ ಶಿಕ್ಷಕಿ ಕೆ.ಬಿ.ಲಲಿತಾಂಬ ಅಧ್ಯಕ್ಷತೆ ವಹಿಸಲಿದ್ದಾರೆ. ಸಾಹಿತಿ ಬನ್ನೂರು ಕೆ.ರಾಜು ಉದ್ಘಾಟಿಸುವರು, ಪ್ರೊ.ಸಿದ್ದರಾಮಯ್ಯ, ವಿಶ್ರಾಂತ ಪತ್ರಾಂಕಿತ ಪಿ.ಮಂಜುಳ ಹಾಗೂ ಪತ್ರಕರ್ತ ಹೊಮ್ಮ ಮಂಜುನಾಥ್ ಪುರಸ್ಕಾರ ಪ್ರದಾನ ಮಾಡುವರು. (ಕೆ.ಎಂ.ಆರ್)