ಸುದ್ದಿ ಸಂಕ್ಷಿಪ್ತ

ಪ್ರವೇಶ ಪ್ರಾರಂಭ

ಮೈಸೂರು,ಜೂ.14-ದಿ ಇನ್ ಸ್ಟಿಟ್ಯೂಟ್ ಆಫ್ ಕಾಸ್ಟ್ ಅಕೌಂಟೆಂಟ್ಸ್ ಆಫ್ ಇಂಡಿಯಾದ ಮೈಸೂರು ಚಾಪ್ಟರ್ ವತಿಯಿಂದ ಫೌಂಡೇಷನ್, ಇಂಟರ್ ಮೀಡಿಯೆಟ್ ಮತ್ತು ಫೈನಲ್ ಕೋರ್ಸ್ ಗಳಿಗೆ ಡಿಸೆಂಬರ್ ಪರೀಕ್ಷೆಗೆ ಪ್ರವೇಶವನ್ನು ಪ್ರಾರಂಭಿಸಲಾಗಿದೆ.
ಫೌಂಡೇಷನ್ ಗೆ ಸೇರಲು ದ್ವಿತೀಯ ಪಿಯುಸಿ ಪಾಸ್ ಆಗಿರಬೇಕು. ಇಂಟರ್ ಮೀಡಿಯೆಟ್ ಗೆ ಸೇರಲು ಫೌಂಡೇಷನ್ ಅಥವಾ ಯಾವುದೇ ಪದವಿ ಪಾಸ್ ಮತ್ತು ಫೈನಲ್ ಗೆ ಸೇರಲು ಇಂಟರ್ ಮೀಡಿಯೆಟ್ ಪಾಸ್ ಆಗಿರಬೇಕು.
ಆಸಕ್ತಿಯುಳ್ಳ ವಿದ್ಯಾರ್ಥಿಗಳು ಕೃಷ್ಣಮೂರ್ತಿಪುರಂನಲ್ಲಿರುವ ಮೈಸೂರು ಚಾಪ್ಟರ್ ಕಚೇರಿಯಲ್ಲಿ ಅಥವಾ ದೂ.ಸಂ.0821-2331083, ಮೊ.ಸಂ. 9538840841 ಮೂಲಕ ಸಂಪರ್ಕಿಸಬಹುದು. (ಎಂ.ಎನ್)

Leave a Reply

comments

Related Articles

error: