ಮೈಸೂರು

ವಿಕಲಚೇತನ ಮಕ್ಕಳಿಂದ ವಿಶ್ವ ಪರಿಸರ ದಿನಾಚರಣೆ

ಮೈಸೂರು,ಜೂ.15:- ಮೈಸೂರಿನ ರಾಮಕೃಷ್ಣ ಬಡಾವಣೆಯ ನಿರೀಕ್ಷೆ ವಿಶೇಷ ಮಕ್ಕಳ ಶಾಲೆಯಲ್ಲಿ ವಿಶ್ವ ಪರಿಸರ ದಿನ ಆಚರಿಸಲಾಯಿತು.
ಮಿಸಸ್. ಇಂಡಿಯಾ ಯೂನಿವರ್ಸ್-2018 ವಿಜೇತರಾದ ಹಾಗೂ ಪರಿಸರ ಸಂರಕ್ಷಣೆಗಾಗಿ ಶ್ರಮಿಸುತ್ತಿರುವ ಮೈಸೂರಿನ ಡಾ. ಹೇಮಾ ಮಾಲಿನಿ ಲಕ್ಷ್ಮಣ್‍ ಶಾಲೆಗೆ ಆಗಮಿಸಿ ಮಕ್ಕಳಿಗೆ ‘ತೋಟಗಾರಿಕೆ ಮತ್ತು ಅದರ ಪ್ರಾಮುಖ್ಯತೆ’ಯ ಬಗ್ಗೆ ಸರಳವಾಗಿ ತಿಳಿಸಿಕೊಟ್ಟರು.
ಶಾಲೆಯ ವಿಕಲಚೇತನ ಮಕ್ಕಳು, ಶಿಕ್ಷಕರು ಹಾಗೂ ಶಾಲೆಯ ಸಿಬ್ಬಂದಿ ವರ್ಗದವರೂ ಪಶ್ನೆಗಳನ್ನು ಕೇಳುವುದರ ಮೂಲಕ ಅನೇಕ ವಿಚಾರಗಳನ್ನು ತಿಳಿದುಕೊಂಡರು. ಮಕ್ಕಳು ವಿವಿಧ ಹೂವು ಗಿಡಗಳ ಸಸಿಗಳನ್ನು ತಯಾರಿಸಿದರು. ಶಾಲೆಯ ಪ್ರಾಂಶುಪಾಲರಾದ ಹೇಮಾಮಾಲಿನಿ ಕೃಪಾಕರ್  ಹಾಗೂ ಶಾಲೆಯ ಛೇರ್ಮನ್‍ರಾದ ಪ್ರವೀಣ್ ಕೃಪಾಕರ್ ಮತ್ತಿತರರು ಉಪಸ್ಥಿತರಿದ್ದರು.(ಜಿ.ಕೆ,ಎಸ್.ಎಚ್)

Leave a Reply

comments

Related Articles

error: