ಕರ್ನಾಟಕಮನರಂಜನೆ

ಕೊಡಗಿಗೆ ಸುಸಜ್ಜಿತ ಆಸ್ಪತ್ರೆ ಬೇಕು ಅಭಿಯಾನಕ್ಕೆ ಸ್ಯಾಂಡಲ್ ವುಡ್ ತಾರೆಯರ ಬೆಂಬಲ

ಬೆಂಗಳೂರು,ಜೂ.15- ಕೊಡಗು ಜಿಲ್ಲೆಯಲ್ಲಿ ಸುಸಜ್ಜಿತವಾದ ಆಸ್ಪತ್ರೆಗಾಗಿ ಅಭಿಯಾನ ಶುರುವಾಗಿದೆ. ಈ ಅಭಿಯಾನಕ್ಕೆ ಎಲ್ಲೆಡೆ ಬೆಂಬಲ ವ್ಯಕ್ತವಾಗುತ್ತಿದ್ದು, ಇದೀಗ ಅಭಿಯಾನಕ್ಕೆ ಸ್ಯಾಂಡಲ್ ವುಡ್ ನ ತಾರೆಯರು ಬೆಂಬಲ ವ್ಯಕ್ತಪಡಿಸಿದ್ದಾರೆ.

ಶಿವರಾಜ್ ಕುಮಾರ್, ಪುನೀತ್ ರಾಜ್ ಕುಮಾರ್, ಸುದೀಪ್, ರಶ್ಮಿಕಾ, ಶಿವರಾಜ್ ಕುಮಾರ್, ಹರ್ಷಿಕಾ ಪೂಣಚ್ಚ ಸೇರಿದಂತೆ ಅನೇಕರು ಬೆಂಬಲ ಸೂಚಿಸಿದ್ದಾರೆ.

ಕೊಡಗು ಎಂದಿಗೂ ಕರ್ನಾಟಕಕ್ಕೆ ಸೇರಿದ್ದು. ನಮ್ಮ ದೇಶ ಕಾಯುವ ಎಷ್ಟೋ ಯೋಧರು ಕೊಡಗಿನವರಾಗಿದ್ದಾರೆ. ಅಲ್ಲಿನ ಜನರಿಗೆ ಆಸ್ಪತ್ರೆಯ ವ್ಯವಸ್ಥೆ ಬಹಳ ಕಡಿಮೆ ಇದೆ ಎಂದು ಕೇಳಿಪಟ್ಟೆ. ಅಲ್ಲಿ ಆಸ್ಪತ್ರೆ ವ್ಯವಸ್ಥೆಗಳು ಆಗಲಿ ಎಂದು ಚಿತ್ರರಂಗದ ಪರವಾಗಿ ನಾನು ಸರ್ಕಾರಕ್ಕೆ ಮನವಿ ಮಾಡುತ್ತಿದ್ದೇವೆ. ನಾವು ನಿಮ್ಮ ಜೊತೆಗೆ ಇದ್ದೇವೆ ಎಂದು ಹೇಳಿದ್ದಾರೆ.

ಪುನೀತ್ ರಾಜ್ ಕುಮಾರ್, ಇಂತಹ ವಿಚಾರದಲ್ಲಿ ಕನ್ನಡ ಚಿತ್ರರಂಗ ಸದಾ ಜೊತೆಯಾಗಿರುತ್ತದೆ. ನಮ್ಮ ಕೈಯಲ್ಲಿ ಏನಾಗುತ್ತದೆ, ಅದನ್ನು ನಾವು ಮಾಡುತ್ತೇವೆ. ಕನ್ನಡಿಗನಾಗಿ ದೇಶದ ಪ್ರಜೆಯಾಗಿ ಇದು ನಮ್ಮ ಕರ್ತವ್ಯ ಎಂದಿದ್ದಾರೆ.

ಕಿಚ್ಚ ಸುದೀಪ್ ಕೂಡ ಕೊಡಗು ಜನರ ಪರ ಧ್ವನಿ ಎತ್ತಿದ್ದಾರೆ. ಬಗ್ಗೆ ಟ್ವೀಟ್ ಮಾಡಿರುವ ಸುದೀಪ್, ಕೊಡಗು ಸ್ನೇಹಿತರು ಮತ್ತು ಕುಟುಂಬದವರ ಬೆಂಬಲಕ್ಕೆ ಯಾವಾಗಲು ಇರುತ್ತೇನೆ. ನಾನು ಖಂಡಿತವಾಗಿ ಅಭಿಯಾನಕ್ಕೆ ಸಹಾಯ ಮಾಡುತ್ತೇನೆ. ನನ್ನ ಸಹಾಯ ಯಾವಾಗಲು ನನ್ನ ಜನತೆಗೆ ಇರುತ್ತೆ ಎಂದು ಹೇಳಿದ್ದಾರೆ.

ಮೂಲಭೂತ ಅಗತ್ಯಗಳಲ್ಲಿ ಒಂದಾದ ಆಸ್ಪತ್ರೆ ನಮ್ಮ ಕೊಡಗಿನಲ್ಲಿ ಇಲ್ಲ. ಒಳ್ಳೆಯ ಆಸ್ಪತ್ರೆಗಾಗಿ ನಾವು ದೂರದ ನಗರಗಳಿಗೆ ಹೋಗಬೇಕಾಗಿದೆ. ಆದಷ್ಟು ಬೇಗ ಸಮಸ್ಯೆ ಪರಿಹಾರವಾದಲ್ಲಿ, ಕೊಡಗಿನ ಜನತೆಗೆ ಅನುಕೂಲವಾಗಲಿದೆ. ದಯವಿಟ್ಟು ಸ್ಪಂದಿಸಿ ಎಂದು ಮುಖ್ಯಮಂತ್ರಿಗಳಿಗೆ ಟ್ವಿಟ್ ಮೂಲಕ ಮನವಿ ಮಾಡಿದ್ದಾರೆ.

ಹರ್ಷಿಕಾ ಪೂಣಚ್ಚ ಇತ್ತೀಚಿಗೆ ನಮ್ಮ ತಂದೆಗೆ ಆರೋಗ್ಯ ಸಮಸ್ಯೆ ಎದುರಾಯಿತು. ನಾನು ಅವರನ್ನು ಬೆಂಗಳೂರಿಗೆ ಕರೆದುಕೊಂಡು ಬರಬೇಕಾಯಿತು. ಪರಿಸ್ಥಿತಿ ಯಾರಿಗೂ ಬರಬಾರದು. ಸಾಕಷ್ಟು ವರ್ಷಗಳಿಂದ ಸಮಸ್ಯೆ ಇದೆ. ಕೊಡಗಿಗೆ ಎಮರ್ಜನ್ಸಿ ಆಸ್ಪತ್ರೆ ಬೇಕೆ ಬೇಕು ಎಂದು ಹೇಳಿದ್ದಾರೆ. (ಎಂ.ಎನ್)

Leave a Reply

comments

Related Articles

error: