ಮೈಸೂರು

ದಲಿತ ಯುವಕನ ಹಲ್ಲೆ ಖಂಡನೀಯ : ಕಮ್ಯೂನಿಷ್ಟ್ ಪಕ್ಷ

ಮೈಸೂರು,ಜೂ.15 : ಗುಂಡ್ಲುಪೇಟೆಯಲ್ಲಿ ದಲಿತ ಯುವಕನನ್ನು ಬೆತ್ತಲೆಗೊಳಿಸಿ ಹಲ್ಲೆ ಮಾಡಿರುವುದನ್ನು ತೀವ್ರವಾಗಿ ಖಂಡಿಸಿ ಆರೋಪಿಸಗಳಿ ಕಠಿಣ ಶಿಕ್ಷೆಯಾಗಬೇಕೆಂದು ಭಾರತ ಕಮ್ಯೂನಿಷ್ಟ ಪಕ್ಷ ಆಗ್ರಹಿಸಿದೆ.

ಶ್ಯಾನಡ್ರಹಳ್ಳಿಯ ಪ್ರತಾಪ್ ದೇವಸ್ಥಾನ ಪ್ರವೇಶಿಸಿ ಅಪವಿತ್ರಗೊಳಿಸಿದ್ದ ಎಂದು ಆರೋಪಿಸಿ ಆತನ ಮೇಲೆ ಅಮಾನವೀಯವಾಗಿ ಹಲ್ಲೆ ನಡೆಸಿರುವುದು ನಾಗರೀಕ ಸಮಾಜ ತಲೆ ತಗ್ಗಿಸುವಂತೆ ಮಾಡಿದೆ,

ದೇವಸ್ಥಾನಗಳಿಗೆ ದಲಿತರ ಪ್ರವೇಶ ನಿಷೇಧ ಹಾಗೂ ಆಸ್ಪೃಶ್ಯತೆ ಆಚರಣೆಯಲ್ಲಿದ್ದರು ಸರ್ಕಾರ ಹಾಗೂ ಪೊಲೀಸ್ ಇಲಾಖೆ ನಿರ್ಲಕ್ಷ್ಯಿಸಿದೆ, ಆದ್ದರಿಂದ ಪರಿಶಿಷ್ಟ ಪಂಗಡ ದೌರ್ಜನ್ಯ ತಡೆ ಕಾಯ್ಡೆ 1989 ಅನ್ನು ಮೂಲ ಕಾಯ್ದೆಯಂತೆ ಜಾರಿಗೊಳಿಸಬೇಕೆಂದು ಕಾರ್ಯದರ್ಶಿ ಕೆ.ಬಸವರಾಜ್ ಒತ್ತಾಯಿಸಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: