ಮೈಸೂರು

ಶಶಿಕಲಾ ನಟರಾಜನ್ ಸಿಎಂ ಆಗಬಾರದು : ಮೈಸೂರಿನಲ್ಲಿ ಪ್ರತಿಭಟನೆ

ತಮಿಳುನಾಡಿನಲ್ಲಿ ರಾಜಕೀಯ ಅರಾಜಕತೆ ಉಂಟಾದ ಹಿನ್ನಲೆಯಲ್ಲಿ ಅದನ್ನು ಖಂಡಿಸಿ ಹಾಗೂ ಶಶಿಕಲಾ ನಟರಾಜನ್ ಸಿಎಂ ಆಗಬಾರದೆಂದು ಒತ್ತಾಯಿಸಿ ಮೈಸೂರಿನ ಪ್ರಜ್ಞಾವಂತ ನಾಗರಿಕ ವೇದಿಕೆ  ಅಂಚೆ ಚಳುವಳಿ ಮೂಲಕ ಪ್ರತಿಭಟನೆ ನಡೆಸಿದೆ.

ಮೈಸೂರಿನ ಚಾಮುಂಡಿಪುರಂ ಸರ್ಕಲ್ ನಲ್ಲಿರುವ ಪೊಲೀಸ್ ಆಫೀಸ್ ಮುಂಭಾಗ ಪ್ರತಿಭಟನೆ ನಡೆಸಿದ ಪ್ರತಿಭಟನಾಕಾರರು ಅಲ್ಲಿ ರಾಷ್ಟ್ರಪತಿ ಆಳ್ವಿಕೆ ಬರಬೇಕು ಎಂದು ಒತ್ತಾಯಿಸಿದರು. ಅಂಚೆ ಕಾರ್ಡ್ ನ್ನು  ಪೋಸ್ಟ್ ಬಾಕ್ಸ್ ಗೆ ಹಾಕುವ ಮೂಲಕ ಶಶಿಕಲಾ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಶಶಿಕಲಾ ಗೆ ಧಿಕ್ಕಾರ ಕೂಗುವ ಮೂಲಕ ಖಂಡಿಸಿದರು. ಪ್ರತಿಭಟನೆಯಲ್ಲಿ  ವಿಕ್ರಮ್, ಕಡಕೊಳ ಜಗದೀಶ್ ನಿಶಾಂತ್, ಅಜಯ್ ಶಾಸ್ತ್ರಿ, ರಂಗನಾಥ್ ಅಯ್ಯಂಗಾರ ಸೇರಿದಂತೆ ಇತರರು ಉಪಸ್ಥಿತರಿದ್ದರು.

Leave a Reply

comments

Related Articles

error: