ಪ್ರಮುಖ ಸುದ್ದಿಮೈಸೂರು

IMA ವಂಚನೆ ಪ್ರಕರಣದಲ್ಲಿ ಯಾರೇ ಭಾಗಿಯಾಗಿದ್ದರೂ ಕ್ಷಮಿಸುವ ಪ್ರಶ್ನೆಯೇ ಇಲ್ಲ : ಗೃಹಸಚಿವ ಎಂ.ಬಿ.ಪಾಟೀಲ್

ಮೈಸೂರು,ಜೂ.17:- ಶೋಭಕ್ಕ ಸ್ವಲ್ಪ ತಾಳ್ಮೆಯಿಂದ ಇರಕ್ಕ, ಅವರು ಹೆಣ್ಣುಮಗಳು ಅಂತ ನಾನು ಯಾವ ಪದಗಳನ್ನೂ ಪ್ರಯೋಗಿಸುತ್ತಿಲ್ಲ. ನಾವು ಬಿಜಾಪುರದವರು‌ ನಮಗೆ ಬೇರೆ ಪದಗಳೇ ಗೊತ್ತು ಎಂದು ಮೈಸೂರಿನಲ್ಲಿ ಸಂಸದೆ ಶೋಭ ಕರಂದ್ಲಾಜೆಗೆ   ಗೃಹಸಚಿವ ಎಂ.ಬಿ.ಪಾಟೀಲ್ ತಿರುಗೇಟು ನೀಡಿದ್ದಾರೆ.

ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಗೃಹಸಚಿವರು ಶೋಭಕರಂದ್ಲಾಜೆಯಂತಹ ಹೆಣ್ಣು ಮಕ್ಕಳ ಬಾಯಲ್ಲಿ ಅಂತ ಪದ ಬರಬಾರದು. ಅವರ ಹಿನ್ನೆಲೆ, ಸಂಸ್ಕಾರ, ಸಂಸ್ಕೃತಿ ಜನರಿಗೆ ಗೊತ್ತಿದೆ. ಅದೇ ನಮ್ಮ ಸಂಸ್ಕಾರ ಹಾಗೂ ಸಂಸ್ಕೃತಿಯು ಜನರಿಗೆ ಗೊತ್ತಿದೆ. ಜಿಂದಾಲ್ ವಿಚಾರದಲ್ಲಿ ಶೋಭಕ್ಕನಿಗೆ ತಕರಾರಿದ್ದರೆ ಕಮಿಟಿ ಮುಂದೆ ಹೋಗಲಿ. ಅದಕ್ಕಾಗಿಯೇ ಒಂದು ಕಮಿಟಿ ರಚನೆ ಆಗಿದೆ. ಅಲ್ಲಿ ಹೋಗಿ ಮಾತನಾಡಲಿ. ಅದನ್ನು ಬಾಯಿಗೆ ಬಂದಂತೆ ಮಾತನಾಡೋದು ಸರಿಯಲ್ಲ ಎಂದು ಕಿಡಿಕಾರಿದರು.

IMA ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿ  ಪ್ರಕರಣದಲ್ಲಿ ಯಾರೇ ಭಾಗಿಯಾಗಿದ್ದರೂ ಕ್ಷಮಿಸುವ ಪ್ರಶ್ನೆಯೇ ಇಲ್ಲ. ಅವರು ಸಚಿವರಾಗಿದ್ದರೂ ಸರಿ, ಶಾಸಕರಾಗಿದ್ದರೂ ಸರಿ. ನಮ್ಮ ಇಲಾಖೆ ಪೊಲೀಸರ ಮೇಲೆ‌ ನನಗೆ ನಂಬಿಕೆ ಇದೆ. ಎಸ್.ಐ.ಟಿ. ಇದನ್ನು ಸಮರ್ಪಕವಾಗಿ ನಿಭಾಯಿಸಲಿದೆ. ಸಿಬಿಐಗೆ ಕೊಟ್ಟ ಕೇಸ್‌ಗಳು ಏನಾಗಿವೆ ಅಂತ ನಮಗೆ ಗೊತ್ತಿವೆ. ದಿಢೀರ್‌ನೆ ಬಿಜೆಪಿಯವರಿಗೆ ಸಿಬಿಐ ಮೇಲೆ ನಂಬಿಕೆ ಶುರುವಾಗಿದೆ. ನಮ್ಮ ಮುಂದೆ ಇರೋದು ಹಣ ಕಳೆದುಕೊಂಡವರಿಗೆ ಹಣ ವಾಪಸ್ ಕೂಡಿಸೋದು. ವಂಚನೆಕಾರರ ಆಸ್ತಿ ಜಪ್ತಿ ಮಾಡೋದು. ಇಂತಹ ಬೇರೆ ಕಂಪನಿಗಳು ತಲೆ ಎತ್ತದಂತೆ ನೋಡಿಕೊಳ್ಳೋದು.   ನಾವೆಲ್ಲ ಆ ಕೆಲಸ ಮಾಡುತ್ತಿದ್ದೇವೆ. ಚಾರ್ಜ್‌ಶೀಟ್ ಆಗದೆ ಯಾರ್ಯಾರ ಹೆಸರನ್ನೋ ಹೇಳೋದು ಸರಿಯಲ್ಲ ಎಂದರು.

ಗುಂಡ್ಲುಪೇಟೆ ಯುವಕನ ಬೆತ್ತಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಐಜಿಪಿ ಜೊತೆ ನಾನೇ ಮಾತಾಡಿದ್ದೇನೆ. ಯಾರೇ ತಪ್ಪಿತಸ್ಥಾರಾಗಿದ್ದರೂ ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಳ್ಳಲಾಗುವುದು. ಈ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ತೆಗೆದುಕೊಂಡಿದೆ ಎಂದರು. (ಕೆ.ಎಸ್,ಎಸ್.ಎಚ್)

 

 

Leave a Reply

comments

Related Articles

error: