ಮೈಸೂರು

ಬರುವ ಸಮಸ್ಯೆಗಳನ್ನು ಪರಿಹರಿಸಿಕೊಂಡು, ಬದಲಾಗುತ್ತಿರುವ ವ್ಯವಸ್ಥೆಗೆ ಅಪ್ ಡೇಟ್ ಆಗಬೇಕಿದೆ : ಹೆಚ್.ವಿ.ರಾಜೀವ್

ಮೈಸೂರು,ಜೂ.17:- ಬರುವ ಸಮಸ್ಯೆಗಳನ್ನು ಸಂಘಟಿತರಾಗಿ ಎದುರಿಸುವ ಜೊತೆಗೆ ಬದಲಾಗುತ್ತಿರುವ ವ್ಯವಸ್ಥೆಗೆ ಅಪ್ ಡೇಟ್ ಆಗಬೇಕಿದೆ ಎಂದು ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿಯಮಿತದ ನಿರ್ದೇಶಕ ಹೆಚ್.ವಿ.ರಾಜೀವ್ ತಿಳಿಸಿದರು.

ಅವರಿಂದು ಜೆಎಲ್ ಬಿ ರಸ್ತೆಯಲ್ಲಿರುವ ಹೋಟೆಲ್ ಮಯೂರ ಹೊಯ್ಸಳದಲ್ಲಿ ಸೌಹಾರ್ದ ಸಹಕಾರಿಗಳ ಸಂಪರ್ಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.  ಯಾವ ಅಪೇಕ್ಷೆಯೂ ಇಲ್ಲದೆ ನಿಸ್ವಾರ್ಥ ಸೇವೆ ಸಲ್ಲಿಸುವವರು ಓರ್ವರಿಂದ ಕಳಂಕಿತರಾಗುವ ಸಾಧ್ಯತೆಯಿದ್ದು, ಪ್ರಾರಂಭಿಕ ಹಂತದಲ್ಲೇ ಅಂಥವರ ಕುರಿತು ಗಮನ ಹರಿಸಿ ಬದಲಾವಣೆ ಮಾಡಿದರೆ ಕಾರ್ಯನಿರ್ವಹಿಸಲು ಅನುಕೂಲ. ಮಾಧ್ಯಮಗಳಲ್ಲಿ ನಿಷ್ಕಾ ಬಗ್ಗೆ ವರದಿಯಾಗಿದ್ದು, ಓರ್ವ ವ್ಯಕ್ತಿ ಕಳಂಕಿತನಾಗಿದ್ದು ಬಿಟ್ಟರೆ ಮತ್ತೆರಡು ಸಂಸ್ಥೆಗಳು ಉತ್ತಮವಾಗಿಯೇ ಕಾರ್ಯನಿರ್ವಹಿಸಿವೆ. ಈ ರೀತಿ ಸನ್ನಿವೇಶ ದುರುಪಯೋಗ ಮಾಡುವ ಒಂದಿಬ್ಬರು ವ್ಯಕ್ತಿಗಳು ಬಂದಾಗ ಪ್ರಾರಂಭಿಕ ಹಂತದಲ್ಲೇ ಎಚ್ಚೆತ್ತು ಗಮನಿಸಿ ಬದಲಾವಣೆ ಮಾಡಿದರೆ, ಅಂತಹ ವ್ಯಕ್ತಿಗಳಿಗೆ ಕಡಿವಾಣ ಹಾಕಿದರೆ ಕೆಲಸ ಮಾಡಲು ಅನುಕೂಲ ಎಂದರು.

ಸಹಕಾರಿ ಸಂಘಗಳು ಸಂಘಟಿತವಾಗಬೇಕು. ಚಳವಳಿ ಬಲಿಷ್ಠಗೊಳಿಸಿ ಸರ್ಕಾರದ ವಿಮುಖ ನೀತಿಯನ್ನು ಸಂಘಟಿತವಾಗಿ ಎದುರಿಸಿ ಈ ಕ್ಷೇತ್ರದಲ್ಲಿ ವಿಶ್ವಾಸ ಮೂಡಿಸುವುದು, ಹೆಚ್ಚು ಠೇವಣಿ ತರುವುದು, ಹೆಚ್ಚು ಜನರಿಗೆ ಸಾಲವನ್ನು ವಿತರಿಸುವುದು, ಈ ಎಲ್ಲದರ ಮೂಲಕ ಈ ಕ್ಷೇತ್ರವನ್ನು ಬೆಳೆಸಬೇಕು ಎಂದರು. ಮೈಸೂರು ನ್ಯಾಶನಲ್ ಬ್ಯಾಂಕ್ ಗಳ ಹಿಡಿತ ಹಾಗೂ ವ್ಯಾಪ್ತಿ ಇರುವ ಪ್ರದೇಶವಾಗಿದೆ. ವಿದ್ತಾರವಾಗಿ ಬೆಳೆಯಲು ಅವಕಾಶವಿದೆ. ಗಮನ ಈ ಕ್ಷೇತ್ರದಲ್ಲಿಯೇ ಇರಿಸಿ ಸ್ವತಂತ್ರ ಪರಿಧಿಯೊಳಗೆ ಇರಬೇಕೆಂಬ ವಿಚಾರವನ್ನು ಎಚ್ಚರಿಕೆಯಿಂದಿಟ್ಟುಕೊಂಡು ಬ್ಯುಸಿನೆಸ್ ವಿಚಾರವನ್ನು ಎಲ್ಲಿಯೂ ಕಾಂಪ್ರಮೈಸ್ ಮಾಡಿಕೊಳ್ಳದೇ ಸದಾ ಎಚ್ಚರಿಕೆಯಿಂದ ಮಾಡಿದರೆ ಅರಿವಿಲ್ಲದೇ, ಸಹಸ್ರಾರು ಕುಟುಂಬಗಳು ನೆಮ್ಮದಿಯಿಂದ ಖಾಸಗಿ ವ್ಯಕ್ತಿಗಳ ಶೋಷಣೆಯಿಂದ ಮುಕ್ತಗೊಳಿಸುವಂತ ಕ್ಷೇತ್ರದಲ್ಲಿ ಸೇವೆ ಮಾಡುವಂತಹ ಅವಕಾಶವಿದೆ. ಹೆಚ್ಚು ಉದ್ದಿಮೆ, ಸ್ಮಾಲ್ ಸ್ಕೇಲ್ ಉದ್ದಿಮೆಗಳಿಗೂ ಅವಕಾಶವಿದೆ. ಬರುವ ಸಮಸ್ಯೆಗಳನ್ನು ಪರಿಹರಿಸಿಕೊಂಡು, ಬದಲಾಗುತ್ತಿರುವ ವ್ಯವಸ್ಥೆಗೆ ಅಪ್ ಡೇಟ್ ಆಗಬೇಕಿದೆ ಎಂದರು.

ಈ ಸಂದರ್ಭ  ಪ್ರಾಂತೀಯ ವ್ಯವಸ್ಥಾಪಕ ನಾರಾಯಣ ಹೆಗಡೆ, ಅಧ್ಯಕ್ಷ ಬಿ.ಹೆಚ್.ಕೃಷ್ಣಾರೆಡ್ಡಿ, ಮಾಜಿ ನಿರ್ದೇಶಕ ಎಂ.ಕೆ.ಸೋಮಯ್ಯ,  ಉದ್ದೇಶಿತ ಮೈಸೂರು,ಮಂಡ್ಯ ಕೊಡಗು ಒಕ್ಕೂಟದ  ಅಧ್ಯಕ್ಷ ನವೀನ್  ಉಪಸ್ಥಿತರಿದ್ದರು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: