ಕರ್ನಾಟಕ

ಜುಲೈ 17ರಿಂದ ಶಿವಮೊಗ್ಗದಲ್ಲಿ ವಾಯುಪಡೆಯ ಮೆಗಾ ರಿಕ್ರೋಟ್‍ಮೆಂಟ್ ರ್‍ಯಾಲಿ

ಹಾಸನ (ಜೂ.17): ಭಾರತೀಯ ವಾಯುಪಡೆಯಲ್ಲಿ ಖಾಲಿಯಿರುವ ಗ್ರೂಪ್ “ವೈ”(ಮೆಡ್ ಅಸಿಸ್ಟೆಂಟ್, ಐ ಎ ಎಫ್/ಪಿ ಮತ್ತು ಆಟೋ ಟೆಕ್ ಟ್ರೇಡ್ಸ್) ಹುದ್ದೆಗಳ ನೇಮಕಾತಿ ರ್ಯಾಲಿಯು ಜುಲೈ. 17 ರಿಂದ 22 ರವರೆಗೆ ಶಿವಮೊಗ್ಗದ ನೆಹರು ಸ್ಟೇಡಿಯಂ ನಲ್ಲಿ ನಡೆಯಲಿದೆ.
ವಿದ್ಯಾರ್ಹತೆ:- ಪಿ.ಯು.ಸಿ ಅಥವಾ 12ನೇ ತರಗತಿಗೆ ಸಮನಾಂತರವಾದ ಶಿಕ್ಷಣದಲ್ಲಿ ಶೇಕಡ 50% ಅಂಕಗಳನ್ನು ಪಡೆದ ತೇರ್ಗಡೆ ಹೊಂದಿರಬೇಕು.

ಇಂಗ್ಲೀಷ್ ವಿಷಯದಲ್ಲಿ ಶೇಕಡಾ 50% ಅಂಕಗಳನ್ನು ಪಡೆದು ತೇರ್ಗಡೆ ಹೊಂದಿರಬೇಕು. ವಯೋಮಿತಿ:- 19/07/1999 ಮತ್ತು 01/07/2003 ರ ಅವಧಿಯಲ್ಲಿ ಜನಿಸಿರಬೇಕು. ದೇಹದಾರ್ಢ್ಯತೆ:- ಎತ್ತರ ಕನಿಷ್ಟ 152.5 ಸೆ.ಮಿ(ಮೆಡ್ ಅಸಿಸ್ಟೆಂಟ್) 175 ಸೆ.ಮೀ (ಐ ಎ ಎಫ್/ಪಿ ಮತ್ತು ಆಟೋ ಟೆಕ್ ಟ್ರೇಡ್ಸ್) ಹೊಂದಿರಬೇಕು. ಯಾವುದೇ ಅರ್ಜಿಯನ್ನು ಸಲ್ಲಿಸುವ ಅಗತ್ಯ ಇರುವುದಿಲ್ಲ.

ರ್ಯಾಲಿಗೆ ತಮ್ಮ ಮೂ¯ ಸರ್ಟಿಫಿಕೇಟ್‍ಗಳೊಂದಿಗೆ 4 ಸೆಟ್ ಜೆರಾಕ್ಸ್ ಪ್ರತಿಗಳನ್ನು ಹಾಗೂ 30 ಪಾಸ್‍ಪೋರ್ಟ್ ಸೈಜಿನ ಪೋಟೋಗಳನ್ನು ಹಾಗೂ ಹೆಚ್.ಬಿ ಪೆನ್ಸಿಲ್, ಪೆನ್, ಅಳಿಸುವ ರಬ್ಬರು, ಆಧಾರ್ ಕಾರ್ಡ್ (ಇದ್ದಲ್ಲಿ) ನೊಂದಿಗೆ ಎರಡು ಸ್ವವಿಳಾಸವಿರುವ 24×10 ಸೆ.ಮೀ ಅಳತೆಯ ಕವರ್ ಗಳನ್ನು ತೆಗೆದುಕೊಂಡು ಹೋಗಬೇಕು.

ಹೆಚ್ಚಿನ ಮಾಹಿತಿಗೆ ದೂರವಾಣೆ ಸಂಖ್ಯೆ 080-25592199 ಅನ್ನು ಸಂಪರ್ಕಿಸಲು ಕೋರಿದೆ. ಅಥವಾ ಸ್ಥಳೀಯ ಮಾಹಿತಿಗಾಗಿ ವಿಜಯಲಕ್ಷ್ಮಿ ಜೆ ಬಿ, ಉದ್ಯೋಗಾಧಿಕಾರಿ, ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ, ಹಾಸನ ಇವರನ್ನು ಖುದ್ದಾಗಿ ಅಥವಾ ದೂರವಾಣಿ ಸಂಖ್ಯೆ: 08172 – 268374 ಅನ್ನು ಸಂಪರ್ಕಿಸಿ ಮಾಹಿತಿ ಪಡೆದುಕೊಳ್ಳಲು ಉದ್ಯೋಗಾಧಿಕಾರಿ ಜೆ ಬಿ ವಿಜಯಲಕ್ಷ್ಮಿ ತಿಳಿಸಿದ್ದಾರೆ. (ಎನ್.ಬಿ)

Leave a Reply

comments

Related Articles

error: