ಕರ್ನಾಟಕಪ್ರಮುಖ ಸುದ್ದಿ

ಸಿಎಂ ಕುರ್ಚಿ ಉಳಿಸಿಕೊಳ್ಳಲು ಹೈಕಮಾಂಡ್‍ಗೆ ಸಾವಿರ ಕೋಟಿ: ಯಡಿಯೂರಪ್ಪ ಗಂಭೀರ ಆರೋಪ

ಬಾಗಲಕೋಟೆ: ತಮ್ಮ ಸಿಎಂ ಕುರ್ಚಿ ಉಳಿಸಿಕೊಳ್ಳುವ ಸಲುವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೈಕಮಾಂಡ್‍ಗೆ ಒಂದು ಸಾವಿರ ಕೋಟಿ ರೂ. ಹಣ ನೀಡಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಗಂಭೀರ ಆರೋಪ ಮಾಡಿದ್ದಾರೆ.

ಮುಖ್ಯಂಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಆಪ್ತರೂ ಆಗಿರುವ ವಿಧಾನ ಪರಿಷತ್ ಸದಸ್ಯ ಗೋವಿಂದರಾಜು ಅವರ ಮೂಲಕ ಕಾಂಗ್ರೆಸ್‌ನ ದೆಹಲಿಯ ಕೆಲವು ನಾಯಕರಿಗೆ ಈ ಮೊತ್ತದ ಹಣ ಸಂದಾಯ ಮಾಡಿದ್ದಾರೆ ಎಂದು ಬಾಗಲಕೋಟೆಯಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಯಡಿಯೂರಪ್ಪ ಅವರು ಹೊಸ ಬಾಂಬ್ ಸಿಡಿಸಿದರು. ಇದಲ್ಲದೆ ಜಾರಿ ನಿರ್ದೇಶನಾಲಯ ವಶಪಡಿಸಿಕೊಂಡಿರುವ ಡೈರಿಯಲ್ಲಿನ ಮಾಹಿತಿ ಆಧರಿಸಿ ಗೋವಿಂದರಾಜು ಅವರನ್ನು ಇಡಿ ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿದ್ದಾರೆ ಎಂದು ಯಡಿಯೂರಪ್ಪ ಹೇಳಿದರು.

ಹಣ ನೀಡಿರುವ ಬಗ್ಗೆ ಡೈರಿಯಲ್ಲಿ ಉಲ್ಲೇಖ ಮಾಡಲಾಗಿದೆ. ಸದ್ಯದಲ್ಲೇ ಈ ಕುರಿತು ದಾಖಲೆ ಸಹಿತ ಆಧಾರ ಬಿಡುಗಡೆ ಮಾಡಲು ಸಿದ್ಧ. ‘ಅಧಿವೇಶನದಲ್ಲಿ ಸಿದ್ದರಾಮಯ್ಯ ಅವರು ಸತ್ಯ ಬಾಯ್ಬಿಡಬೇಕು ಎಂದು ಯಡಿಯೂರಪ್ಪ ಒತ್ತಾಯಿಸಿದರು. ಕುಷ್ಟಗಿ ವಿಭಾಗದಲ್ಲಿ ಸಣ್ಣ ನೀರಾವರಿ ಇಲಾಖೆ ಕಾಮಗಾರಿ ಮಾಡದೆ 43 ಕೋಟಿ ರೂ. ತಿಂದಿದ್ದಾರೆ. ಆರೋಪ ಸಾಬೀತಾದರೂ ಹಣ ವಸೂಲಿ ಮಾಡಲಾರದೇ ಸಿಎಂ ಕಣ್ಮುಚ್ಚಿ ಕೈಕಟ್ಟಿ ಕುಳಿತಿದ್ದಾರೆ. ಈ ಎರಡೂ ಆರೋಪಗಳನ್ನು ದಾಖಲೆ ಸಾಬೀತು ಮಾಡಲು ಸಿದ್ಧ ಎಂದರು.

Leave a Reply

comments

Related Articles

error: