ಮೈಸೂರು

ನವರಸಗಳ ಜೊತೆ ವಿವಿಧ ಪ್ರಕಾರಗಳ ನೃತ್ಯ ಪ್ರಾತ್ಯಕ್ಷಿಕೆ : ಗಮನ ಸೆಳೆದ ವಿವಿಧ ಭಂಗಿಗಳು

ನವರಸ ಮತ್ತು ಗತಿಭೇದದ ಸ್ಥಾಯಿಭಾವ, ಸಂಚಾರಿ ಭಾವ ಹಾಗೂ ವ್ಯಭಿಚಾರಿ ಭಾವಗಳ ವಿವಿಧ ಪ್ರಕಾರಗಳನ್ನು ವಸುಂಧರಾ ಪ್ರದರ್ಶಕ ಕಲೆಗಳ ಕೇಂದ್ರ ನಿರ್ದೇಶಕಿ ಡಾ.ವಸುಂಧರಾ ದೊರೆಸ್ವಾಮಿ ಹಾಗೂ ಶಿಷ್ಯೆಯರಾದ ಶ್ರೀಲಕ್ಷ್ಮೀ ಮತ್ತು ಶ್ರೀದೇವಿಯವರು ಪ್ರಾತ್ಯಕ್ಷಿತೆ ನೀಡಿದರು.

ಮೈಸೂರಿನ ಜೆ.ಎಲ್.ಬಿ.ರಸ್ತೆಯಲ್ಲಿರುವ ನಾದಬ್ರಹ್ಮ ಸಂಗೀತ ಸಭಾದ ಕಿರು ಸಭಾಂಗಣ ವಾಸುದೇವಾಚಾರ್ಯ ಸಭಾಂಗಣದಲ್ಲಿ ಎರಡು ದಿನಗಳ ಕಾಲ ನಡೆಯಲಿರುವ  ಪ್ರಾತ್ಯಕ್ಷಿಕೆಯಲ್ಲಿ ಮೊದಲ ದಿನ ಶೃಂಗಾರ, ರೌದ್ರ, ಹಾಸ್ಯ, ಕ್ರೌರ್ಯ, ನಗುವಿನ ವಿವಿಧ ಬಗೆಯ ನವರಸಗಳ ಸನ್ನಿವೇಶಗಳನ್ನು ರಾಮಾಯಣದ ಕಥಾ ವಸ್ತುವನ್ನಾಧರಿಸಿ ಪ್ರಾತ್ಯಕ್ಷಿತೆ ನಡೆಸಿದರು. ಅರಣ್ಯದಲ್ಲಿ ರಾಮ-ಸೀತೆಯು ನಡೆಸುವ ಸರಸ ಸಲ್ಲಾಪದ ಶೃಂಗಾರ ಭಾವ’ ಕರುಣಾ ಭಾವವನ್ನು ಶ್ರೀಲಕ್ಷ್ಮೀ-ಶ್ರೀದೇವಿ ವಿಶಿಷ್ಠವಾಗಿ ಹಾಗೂ ಭಾವಪೂರ್ಣವಾಗಿ ಅಭಿನಯಿಸಿದರು.

ಡಾ.ವಸುಂಧರಾ ದೊರೆಸ್ವಾಮಿ ಅವರು ಶ್ರೀರಾಮ-ಸೀತಾ ಸ್ವಯಂವರದ ಬಿಲ್ಲು ಮುರಿದ ಪ್ರಸಂಗ ವೀರರಸ’  ರೌದ್ರ ರೂಪ ಹಾಗೂ ನಗುವಿನ ವಿವಿಧ ಬಗೆಯನ್ನು ಮನಮುಟ್ಟುವಂತೆ ಅಭಿನಯಿಸಿದ ಅವರು ದೇಹ-ಮನಸ್ಸು ಸೇರಿಸುವ ಸಾತ್ವಿಕ ಭಾವವನ್ನು ಮನೋಜ್ಞವಾಗಿ ಪ್ರದರ್ಶಿಸಿದರು.

ಡಾ.ತುಳಸಿ ರಾಮಚಂದ್ರ ಮತ್ತು ಇತರೆ ಕಲಾವಿದರು ಸೇರಿ ‘ಅಷ್ಟ ನಾಯಕಿಯರು’ ನೃತ್ಯ ಪ್ರಕಾರಗಳನ್ನು ಪ್ರದರ್ಶಿಸಿದರು. ನಂದನಾ ಪ್ರದರ್ಶಕ ಕಲೆಗಳ ಕೇಂದ್ರದ, ಅಕಾಡೆಮಿ ಆಫ್ ಪರ್ಫಾಮಿಂಗ್ ಆರ್ಟ್ಸ್‍ ನೃತ್ಯಾಲಯ ಟ್ರಸ್ಟ್ ನ ಹಾಗೂ ವಸುಂಧರಾ ಪ್ರದರ್ಶಕ ಕಲೆಗಳ ಕೇಂದ್ರದ ಶಿಷ್ಯಂದಿರು ಪ್ರಾತ್ಯಕ್ಷಿಕೆಯಲ್ಲಿ ಪಾಲ್ಗೊಂಡು ಸಂವಾದ ನಡೆಸಿದರು.

 

 

Leave a Reply

comments

Related Articles

error: