ಮೈಸೂರು

ಮನೆಯ ಸುತ್ತಮುತ್ತ ಗಿಡಬೆಳೆಸಿ ಪರಿಸರವನ್ನು ಉಳಿಸಲು ಮುಂದಾಗಿ : ಡಾ. ಪುಷ್ಪಾ ಅಮರನಾಥ್

ಮೈಸೂರು,ಜೂ.18:- ಪ್ರಕೃತಿ ನಾಶದಿಂದಾಗಿ ವಿಶ್ವವೇ ತಲ್ಲಣಿಸುವ ಪರಿಸ್ಥಿತಿ ಎದುರಾಗಿದ್ದು ಪ್ರತಿಯೊಬ್ಬರೂ ಮನೆಯ ಸುತ್ತಮುತ್ತ ಗಿಡಬೆಳೆಸಿ ಪರಿಸರವನ್ನು ಉಳಿಸಲು ಮುಂದಾಗಬೇಕು ಎಂದು ರಾಜ್ಯ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ  ಡಾ. ಪುಷ್ಪಾ ಅಮರನಾಥ್ ತಿಳಿಸಿದರು.

ನಿನ್ನೆ ಹುಣಸೂರು ತಾಲೂಕಿನ ಮರದೂರು ಲಾಸಲೆಟ್ ವಿದ್ಯಾನಿಕೇತನ ಸಂಸ್ಥೆ ವತಿಯಿಂದ ಕೊಡಮಾಡುವ ಪರಿಸರ ಮಿತ್ರ-2019 ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು. ವಿಶ್ವಪರಿಸರ ದಿನಾಚರಣೆಯಲ್ಲಿ ಈ ಬಾರಿ ವಾಯು ಮಾಲಿನ್ಯ ತಡೆಗಟ್ಟುವ ಗುರಿ ಹೊಂದಲಾಗಿದೆ.   ಪರಿಸರ ದಿನಾಚರಣೆಯನ್ನು ಕೇವಲ ಜೂನ್ 5ಕ್ಕೆ ಸೀಮಿತಗೊಳಿಸಿದರೆ ಸಾಲದು. ಪ್ರತಿಯೋರ್ವ ವಿದ್ಯಾರ್ಥಿಯೂ ತನ್ನ ಮನೆಯ ಸುತ್ತಮುತ್ತ ಮರಗಿಡಗಳನ್ನು ಹಸಿರನ್ನು ಕಾಪಾಡಬೇಕು. ಸ್ಥಳವಿಲ್ಲದಿದ್ದಲ್ಲಿ ಕನಿಷ್ಠ ಕುಂಡಗಳಲ್ಲಾದರೂ ಬೆಳೆಸಬೇಕು ಎಂದರು.

ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸೋಮಪ್ಪ, ವಿದ್ಯಾಸಂಸ್ಥೆಯ ನಿರ್ದೇಶಕ ಫಾ.ಜೋಬಿಟ್ ಡಾ. ಪುಷ್ಪಾ ಅಮರನಾಥ್ ಅವರಿಗೆ ಕಿರೀಟ ತೊಡಿಸಿ ಪ್ರಶಸ್ತಿ ಪ್ರದಾನ ಮಾಡಿದರು.

ಈ ಸಂದರ್ಭ ಎಸಿಎಫ್ ಸೋಮಪ್ಪ, ಸಂಸ್ಥೆಯ ವ್ಯವಸ್ಥಾಪಕ ಫಾ.ಜೋಜೋ, ಫಾ.ತೂಯನಾಧನ್, ಪ್ರಾಚಾರ್ಯ ರವಿ ದೀಪಕ್, ಮುಖ್ಯ ಶಿಕ್ಷಕಿ ಸಿಸ್ಟರ್ ಕರುಣಾ, ಉಪಪ್ರಾಂಶುಪಾಲರಾದ ಫಾ.ಅನಿಟ್ ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: