ಮೈಸೂರು

ಎಲ್ ಇಡಿ ವಿಡಿಯೋ ವಾಲ್ ಕಾರ್ಯಾಗಾರ

ಶೃತಿ ವಿಡಿಯೋ ವರ್ಲ್ಡ್ ಮೈಸೂರು ಇವರ ಸಹಯೋಗದಲ್ಲಿ ಜೋನಾ ಎಲ್.ಇ.ಡಿ ವಿಡಿಯೋ ವಾಲ್ ಹಾಗೂ ನೋವಾ ಸ್ಟಾರ್ ಸಾಫ್ಟ್ ವೇರ್ ಬಗೆಗೆ‌ ಒಂದು ದಿನದ ಕಾರ್ಯಾಗಾರವನ್ನ ಮೈಸೂರಿನ ಹೋಟೆಲ್ ಪೈ ವಿಸ್ತಾದಲ್ಲಿ ಹಮ್ಮಿಕೊಳ್ಳಲಾಗಿತ್ತು.

ಕಾರ್ಯಾಗಾರಕ್ಕೆ ತಿಪ್ಪೇಸ್ವಾಮಿಯವರು ದೀಪ ಬೆಳಗುವ ಮೂಲಕ ಚಾಲನೆ ನೀಡಿದರು. ಇದಕ್ಕೂ ಮುನ್ನ ಎಲ್.ಇ.ಡಿ‌ ವಿಡಿಯೋ ವಾಲ್ ಬಗ್ಗೆ ಟೆಕ್ನಿಕಲ್‌ ರೀತಿಯಲ್ಲೇ ತಜ್ಞರು ಮಾಹಿತಿ ನೀಡಿದರು. ಈ ವೇಳೆ ಮಾಹಿತಿ‌ ನೀಡಿದ ರಾಜನ್ ಮಲಾನ್ ಎಲ್.ಇ.ಡಿ‌ ಎಂಬುದು ಹೊಸ ಆವಿಷ್ಕಾರ. ಇದನ್ನು ಹೇಗೆ ನಿಭಾಯಿಸಬೇಕು ಎಂಬುದನ್ನು  ಈ‌ ಕಾರ್ಯಗಾರದ ಮೂಲಕ ತಿಳಿಸಿಕೊಡಲಿದ್ದೇವೆ ಎಂದರು. ಮಾತ್ರವಲ್ಲದೇ, ಎಲ್.ಇ.ಡಿ ವಿಡಿಯೋ ವಾಲ್, ಎಲ್.ಇ.ಡಿ ಬಲ್ಬ್ ಗಳಿಂದ ಆಗಿರುತ್ತೆ. ಇದು ಹೆಚ್ಚಾಗಿ ಸೆಮಿನಾರ್, ಮದುವೆ ಸಮಾರಂಭ, ದೊಡ್ಡ ಮಟ್ಟದ ಕಾರ್ಯಕ್ರಮ ಸೇರಿದಂತೆ ಇತರೆಡೆ ಇದನ್ನು ಬಳಸಲಾಗುತ್ತದೆ. ನಾವು ಹಳೆಯ ಹಾಗೂ ಕೆಟ್ಟುಹೋದ ಯಾವುದೇ ಕಂಪನಿಗೆ ಸೇರಿದ ಎಲ್ ಇ ಡಿ ವಿಡಿಯೋ ವಾಲ್ ಗಳನ್ನು ಉಚಿತವಾಗಿ ರಿಪೇರಿ ಮಾಡಿ ಕೊಡುತ್ತೇವೆ ಎಂದರು. ಈ ಉಪಯೋಗವನ್ನು ಮೈಸೂರಿನಾದ್ಯಂತ ಎಲ್ಲರೂ‌ ಪಡೆದುಕೊಳ್ಳಬಹುದು. ಜೊತೆಗೆ ಇತರರಿಗೂ ಮಾಹಿತಿ ನೀಡಬಹುದು ಎಂದರು. ಪ್ರಾಯೋಗಿಕವಾಗಿಯೂ ತಿಳಿಸಿಕೊಡಲಾಯಿತು.  ಇದೇವೇಳೆ ಟೆಕ್ನಿಕಲ್ ಮುಖ್ಯಸ್ಥ ಆಶಿಕ್, ರಾಜೇಂದ್ರ ಕುಮಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು

Leave a Reply

comments

Related Articles

error: