ಮೈಸೂರು

ಕಟ್ಟಡ ತ್ಯಾಜ್ಯಗಳ ಆಗರ ಚಾಮುಂಡಿಬೆಟ್ಟದ ವರ್ತುಲ ರಸ್ತೆ : ಕ್ರಮಕ್ಕೆ ಒತ್ತಾಯ

ಮೈಸೂರು,ಜೂ.19:- ಮೈಸೂರು ನಗರವು ಸಾಕಷ್ಟು ವೇಗವಾಗಿ ಅಭಿವೃದ್ಧಿ ಹೊಂದುತ್ತಿದ್ದು ಪ್ರವಾಸೀ ತಾಣವಾದ ಚಾಮುಂಡಿ ಬೆಟ್ಟ ಮತ್ತು ಉತ್ತನಹಳ್ಳಿಯ ವರ್ತುಲ ರಸ್ತೆಯಿಂದ ಉದ್ದಕ್ಕೂ ಇಕ್ಕೆಲಗಳಲ್ಲಿ ಕಟ್ಟಡ ತ್ಯಾಜ್ಯ(ಡೆಬ್ರಿಸ್) ಗಳ ಗುಡ್ಡೆಗಳು ಸ್ವಚ್ಛನಗರಿಯ ಸೌಂದರ್ಯಕ್ಕೆ ಮತ್ತು ಪರಿಸರಕ್ಕೆ ಅತ್ಯಂತ ಮಾರಕವಾಗಿ ಪರಿಣಮಿಸಿದೆ ಎಂದು ಪ್ರಜ್ಞಾವಂತ ನಾಗರೀಕ ವೇದಿಕೆಯ ಜಯಸಿಂಹ ಶ್ರೀಧರ್ ಆರೋಪಿಸಿದ್ದಾರೆ.

ಈ ಕುರಿತು ಮಾಧ್ಯಮ ಹೇಳಿಕೆ ನೀಡಿರುವ ಅವರು ಕಟ್ಟಡ ತ್ಯಾಜ್ಯ ಹಾಕಲು ಸ್ಥಳವನ್ನು ಗುರುತಿಸದೇ ಇರುವುದು ಮತ್ತು ಕಟ್ಟಡದ ಗುತ್ತಿಗೆದಾರರು ಮತ್ತು ಲಾರಿ ಮಾಲೀಕರ ಬೇಜವಾಬ್ದಾರಿ ತನವೂ ಇದಕ್ಕೆ ಕಾರಣ.

ಜಿಲ್ಲಾಡಳಿತ ಮತ್ತು ಜನಪ್ರತಿನಿಧಿಗಳು ಮತ್ತು ಸ್ವಚ್ಛ ಮೈಸೂರಿನ ತಂಡದವರು ಈ ಕೂಡಲೇ ಸಭೆ ಕರೆದು ಕಟ್ಟಡ ತ್ಯಾಜ್ಯ ವಿಲೇವಾರಿ ಬಗ್ಗೆ ಸ್ಥಳ ಗುರುತಿಸಿ ಅದರ ನಿರ್ವಹಣೆಯ ಬಗ್ಗೆ ಕ್ರಮ ಕೈಗೊಳ್ಳಬೇಕಾಗಿ ವಿನಂತಿಸಿದ್ದಾರೆ. (ಎಸ್.ಎಚ್)

Leave a Reply

comments

Related Articles

error: