Uncategorized

ಡ್ರೈವಿಂಗ್ ಲೈಸೆನ್ಸ್: ಕನಿಷ್ಠ ವಿದ್ಯಾರ್ಹತೆ ನಿಯಮ ಕೈಬಿಡಲು ನಿರ್ಧರಿಸಿದ ಕೇಂದ್ರ

ನವದೆಹಲಿ,ಜೂ.19-ವಾಹನ ಚಾಲನಾ ಪರವಾನಗಿ ಪಡೆಯಲು ಕನಿಷ್ಠ ಶಿಕ್ಷಣ ಅರ್ಹತೆಯಿರಬೇಕು ಎಂಬ ನಿಯಮವನ್ನು ಕೈಬಿಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ

ಕನಿಷ್ಠ ವಿದ್ಯಾರ್ಹತೆಯನ್ನು ತೆಗೆದು ಹಾಕಿದರೂ ರಸ್ತೆ ಸುರಕ್ಷತೆ ವಿಚಾರದಲ್ಲಿ ಯಾವುದೇ ರಾಜಿ ಮಾಡಲಾಗುವುದಿಲ್ಲ. ಚಾಲಕರಿಗೆ ತರಬೇತಿ ಹಾಗೂ ಅವರ ಚಾಲನಾ ಸಾಮರ್ಥ್ಯ ಒರೆಗೆ ಹಚ್ಚಲು ಕಠಿಣ ಪರೀಕ್ಷೆ ಅಗತ್ಯವಾಗಿದೆ ಎಂದು ಹೇಳಿದೆ.

ಆರ್ಥಿಕವಾಗಿ ಹಿಂದುಳಿದ ಹಾಗೂ ದುರ್ಬಲ ವರ್ಗದ ಜನರಿಗೆ ಪ್ರಯೋಜನ ದೊರಕಿಸುವ ಉದ್ದೇಶದಿಂದ ಸಾರಿಗೆ ವಾಹನ ಚಾಲಕರಿಗಿರಬೇಕಾದ ಕನಿಷ್ಠ ವಿದ್ಯಾರ್ಹತೆಯನ್ನು ತೆಗೆದು ಹಾಕಲು ನಿರ್ಧರಿಸಲಾಗಿದೆ. ಕ್ರಮದಿಂದ ದೊಡ್ಡ ಸಂಖ್ಯೆಯಲ್ಲಿ ನಿರುದ್ಯೋಗಿ ಯುವಕರಿಗೆ ಉದ್ಯೋಗಾವಕಾಶದ ಜತೆಗೆ ಸಾರಿಗೆ ಮತ್ತು ಸರಕು ಕ್ಷೇತ್ರದಲ್ಲಿರುವ 22 ಲಕ್ಷ ಚಾಲಕರ ಕೊರತೆಯನ್ನೂ ಅದು ನೀಗಿಸುವುದು ಎಂದು ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವಾಲಯ ತಿಳಿಸಿದೆ.

1989 ಕೇಂದ್ರ ಮೋಟಾರು ವಾಹನಗಳ ನಿಯಮ (ರೂಲ್‌ 8) ಅಧಿನಿಯಮದ ಪ್ರಕಾರ ಚಾಲನಾ ಪರವಾನಗಿ ಪಡೆಯಲು ಕನಿಷ್ಠ 8ನೇ ತರಗತಿ ಓದಿರಬೇಕು ಎಂಬ ನಿಯಮವಿದೆ. ಇದರ ತಿದ್ದುಪಡಿ ಹಾಗೂ ಕರಡು ಅಧಿಸೂಚನೆಯನ್ನು ಸದ್ಯದಲ್ಲಿಯೇ ಹೊರಡಿಸಲಾಗುವುದು ಎಂದು ಹೇಳಿದೆ. (ಎಂ.ಎನ್)

Leave a Reply

comments

Related Articles

error: