ಮೈಸೂರು

ಸರಣಿ ಕಳ್ಳತನಕ್ಕೆ ಯತ್ನಿಸಿದ ಕಳ್ಳರ ಕೈಚಳಕ ಸಿಸಿಟಿವಿಯಲ್ಲಿ ಸೆರೆ

ಮೈಸೂರು,ಜೂ.19:- ನಿನ್ನೆ ತಡರಾತ್ರಿ ಕಳ್ಳರು ಸರಣಿ ಕಳ್ಳತನಕ್ಕೆ ಯತ್ನಿಸಿರುವ ಘಟನೆ ಜಿಲ್ಲೆಯ ನಂಜನಗೂಡು ಪಟ್ಟಣದ ಹುಲ್ಲಹಳ್ಳಿ ರಸ್ತೆಯಲ್ಲಿ ನಡೆದಿದ್ದು, ಕಳ್ಳರ ಕೈಚಳಕ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಸಿಸಿಟಿವಿಯಲ್ಲಿ ಕಳ್ಳರ ಕೃತ್ಯ  2 ಹಾರ್ಡ್‌ವೇರ್ ಅಂಗಡಿಯ ಬಾಗಿಲು ಮರಿದು ಕಳ್ಳತನಕ್ಕೆ ಯತ್ನಿಸಿದ್ದು, ಬಾಗಿಲು ಸಂಪೂರ್ಣವಾಗಿ ತೆಗೆಯಲಾಗದೇ ಅಲ್ಲಿಂದ ಕಾಲ್ಕಿತ್ತಿದ್ದಾರೆ.   ಪಕ್ಕದಲ್ಲೇ ಇದ್ದ ಹಾಸಿಗೆ ಅಂಗಡಿಯ ಬಾಗಿಲು ಮುರಿದು 5,000 ರೂ ಮೌಲ್ಯದ ವಸ್ತುಗಳು ಮತ್ತು 4 ಬ್ಯಾಟರಿಗಳನ್ನು ಕಳವು ಮಾಡಿದ್ದಾರೆ. 2 ಅಂಗಡಿಯಲ್ಲಿ ಕಳವು ಮಾಡಲು ಯತ್ನಿಸಿದಾಗ ಶಬ್ದ ಬಂದಿದ್ದು, ಶಬ್ದಕ್ಕೆ ಹೆದರಿ ಕಳ್ಳರು ಪರಾರಿಯಾಗಿದ್ದಾರೆ.

ಈ ಎಲ್ಲಾ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಈ ಸಂಬಂಧ ನಂಜನಗೂಡು ಪೊಲೀಸ್​ ಠಾಣೆಯಲ್ಲಿ ದೂರು ದಾಖಲಾಗಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: