ಮೈಸೂರು

ರಾಷ್ಟ್ರ ಮಟ್ಟದ ಕುಸ್ತಿ ಪಂದ್ಯಾವಳಿ : ಫೆ. 12

ರಾಷ್ಟ್ರಮಟ್ಟದ ಹಿರಿಯ ಕುಸ್ತಿಪಟುಗಳ ಕುಸ್ತಿ ಪಂದ್ಯಾವಳಿಯನ್ನು ಫೆ.12ರಂದು ಮ.3 ಗಂಟೆಗೆ ಡಿ.ದೇವರಾಜು ಅರಸು ವಿವಿಧೋದ್ದೇಶ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದೆ ಎಂದು ಕುಸ್ತಿ ಪಂದ್ಯಾವಳಿಯ ಆಯೋಜಕ ಸುರೇಂದ್ರ ಕುಮಾರ್ ತಿಳಿಸಿದರು.

ಈ ಪಂದ್ಯಾವಳಿಯು ಮೊದಲು ಪಂಜಾಬ್ ನಲ್ಲಿ ನಡೆದಿತ್ತು. ಇದೀಗ ಎರಡನೇ ಬಾರಿಗೆ ಮೈಸೂರಿನಲ್ಲಿ ನಡೆಯುತ್ತಿರುವುದು ಹೆಮ್ಮೆಯ ವಿಷಯ ಎಂದರು. ಒಟ್ಟು 35 ಜತೆ ಕುಸ್ತಿಪಟುಗಳು ಅಂದರೆ 70 ಮಂದಿ ಈ ಕುಸ್ತಿ ಪಂದ್ಯಾವಳಿಯಲ್ಲಿ ಭಾಗವಹಿಸಲಿದ್ದಾರೆ. ಒಂದು ಜತೆ ಕುಸ್ತಿ ಪಟುಗಳಿಗೆ ಸಮಯಾವಕಾಶದ ಪರಿಧಿ ಇರುವುದಿಲ್ಲ. ಇನ್ನೊಂದು ಜತೆಗೆ 1 ಗಂಟೆಯ ಕಾಲಾವಕಾಶವಿರುತ್ತದೆ. ಮಹಾರಾಷ್ಟ್ರ, ಪುಣೆ, ಬಾಂಬೆಯಿಂದ ಕ್ರೀಡಾಪಟುಗಳು ಆಗಮಿಸಲಿದ್ದಾರೆ. ಯುವಕರನ್ನು ನಾಚಿಸುವ ಪರಿಯಲ್ಲಿ ಹಿರಿಯ ಕ್ರೀಡಾಪಟುಗಳು ತಮ್ಮ ಪ್ರದರ್ಶನ ನೀಡಲಿದ್ದಾರೆ ಎಂದರು.

ಅಂದು ನಡೆಯುವ ಈ ಪಂದ್ಯಾವಳಿಯನ್ನು ನಿವೃತ್ತ ಭಾರತೀಯ ಜನರಲ್ ಪೊಲೀಸ್ ಡಿ.ಎನ್.ಮುನಿಕೃಷ್ಣಪ್ಪ ಅವರು ಉದ್ಘಾಟಿಸಲಿದ್ದಾರೆ. ಶಾಸಕ ಎಂ.ಕೆ.ಸೋಮಶೇಖರ್ ಅಧ‍್ಯಕ್ಷತೆ  ವಹಿಸಲಿದ್ದಾರೆ. ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ಬಹುಮಾನ ವಿತರಣೆ ಮಾಡಲಿದ್ದಾರೆ. ಮೈಸೂರು ವಿ.ವಿ.ಯ ನಿವೃತ್ತ ಕುಲಪತಿ ಪ್ರೊ.ರಂಗಪ್ಪ ಮುಖ್ಯ ಭಾಷಣ ಮಾಡಲಿದ್ದಾರೆ. ಜೊತೆಗೆ ಮೂಡಾ ಅಧ್ಯಕ್ಷ ಡಿ.ಧೃವಕುಮಾರ್ ಅವರಿಗೆ ಅಭಿನಂದನಾ ಸಮಾರಂಭ ಮತ್ತು 40 ಕುಸ್ತಿಪಟುಗಳಿಗೆ ಸನ್ಮಾನ ಕಾರ್ಯಕ್ರಮವಿರುತ್ತದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಕುಸ್ತಿ ಪಂದ್ಯಾವಳಿಯ ವ್ಯವಸ್ಥಾಪಕ ಚೊಕ್ಕಮೂರ್ತಿ, ಸಹ ಆಯೋಜಕರಾದ ಕುಮಾರ್, ಕೆಂಪೇಗೌಡ ಮತ್ತಿತರರು ಹಾಜರಿದ್ದರು.

Leave a Reply

comments

Related Articles

error: