ಪ್ರಮುಖ ಸುದ್ದಿಮೈಸೂರು

ಕಾಂಗ್ರೆಸ್ ವಿರುದ್ಧ ಹೈಕಮಾಂಡ್ ಗೆ ದೇವೇಗೌಡರಾಗಲೀ,ಸಿಎಂ ಹೆಚ್.ಡಿ.ಕುಮಾರಸ್ವಾಮಿ ಆಗಲೀ ಯಾವುದೇ ದೂರು ಕೊಟ್ಟಿಲ್ಲ : ಸಚಿವ ಜಿ.ಟಿ.ದೇವೇಗೌಡ ಸ್ಪಷ್ಟನೆ

ಮೈಸೂರು,ಜೂ.20:- ಕಾಂಗ್ರೆಸ್ ವಿರುದ್ಧ ಹೈಕಮಾಂಡ್ ಗೆ ದೇವೇಗೌಡರಾಗಲೀ,ಸಿಎಂ ಹೆಚ್.ಡಿ.ಕುಮಾರಸ್ವಾಮಿ ಆಗಲೀ,ಸಮನ್ವಯ ಸಮಿತಿಯ ಅಧ್ಯಕ್ಷರಾದ ಸಿದ್ದರಾಮಯ್ಯ ಆಗಲೀ ಯಾವುದೇ ದೂರು ಕೊಟ್ಟಿಲ್ಲ. ಮಾಧ್ಯಮಗಳಲ್ಲಿ ಬರುತ್ತಿರುವ ಸುದ್ದಿ ನಿರಾಧಾರ ಎಂದು ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ಸ್ಪಷ್ಟಪಡಿಸಿದ್ದಾರೆ.

ಮೈಸೂರಿನಲ್ಲಿಂದು ಮಾತನಾಡಿದ ಅವರು ಕಾಂಗ್ರೆಸ್ ವಿರುದ್ಧ ಹೈಕಮಾಂಡ್ ಗೆ ಯಾವುದೇ ದೂರು ನೀಡಿಲ್ಲ. ಎಲ್ಲರು ಅನ್ಯೋನ್ಯವಾಗಿದ್ದಾರೆ. ಸಚಿವ ಸಂಪುಟದಲ್ಲಿ ಪಕ್ಷೇತರರಿಗೆ ಅವಕಾಶ ಕೊಟ್ಟಿರುವವರ ಜೊತೆ ಸಿದ್ದರಾಮಯ್ಯ ಭಾಗವಹಿಸಿದ್ದರು. ಸರ್ಕಾರ ನಡೆಸೋದಕ್ಕೆ ಅವಕಾಶ ಕೊಡಿ. ಎಲ್ಲಾ ರೀತಿ ತೊಡಕುಗಳನ್ನು ನಿವಾರಿಸೋಕೆ ಸಹಕಾರ ಕೊಡಿ ಅಂತ ಮಲ್ಲಿಕಾರ್ಜುನ ಖರ್ಗೆ ಜೊತೆ ಮಾತಾಡಿದ್ದೇವೆ. ಗ್ರಾಮ ವಾಸ್ತವ್ಯ ವಿಚಾರ  ಕುರಿತೂ ಮಾತನಾಡಲು ಹೊರಟಿದ್ದರು ಅಷ್ಟೇ. ಇನ್ನೇನು ರಾಜಕೀಯ ವಿಚಾರ ಮಾತಾಡಿಲ್ಲ. ಕಾಂಗ್ರೆಸ್ ಗೆ ಅಭದ್ರತೆ ಸೃಷ್ಟಿಸುವ ಅವಶ್ಯಕತೆ ಇಲ್ಲ. ಪ್ರೀತಿ ವಿಶ್ವಾಸದಿಂದ ಇರೋದು ನಮ್ಮ ಮುಂದಿನ ಗುರಿ ಎಂದರು.

ಸಿದ್ದರಾಮಯ್ಯ ರಾಹುಲ್ ಗಾಂಧಿ ಭೇಟಿ ವಿಚಾರಕ್ಕೆ ಪ್ರತಿಕ್ರಿಯಿಸಿ ಸಿದ್ದರಾಮಯ್ಯ ರಾಹುಲ್ ಗಾಂಧಿಗೆ ಯಾವುದೇ ದೂರು ಕೊಟ್ಟಿಲ್ಲ. ಚುನಾವಣೆಯಲ್ಲಿ ಸೋಲನ್ನು ಅನುಭವಿಸಿದ್ದಕ್ಕೆ ಅವಲೋಕನೆಗಾಗಿ ತೆರಳಿದ್ದರು. ಜೊತೆಗೆ ಸೋಲಿನ ವರದಿ ಕೊಡುವುದಕ್ಕೆ ಭೇಟಿ ಕೊಟ್ಟಿದ್ದರು ಎಂದು ಸಚಿವರು ಸ್ಪಷ್ಟನೆ ನೀಡಿದರು.

ಐಎಂಎ ವಿಚಾರಕ್ಕೆ ಪ್ರತಿಕ್ರಿಯಿಸಿ 1600 ಕ್ಕೂ ಹೆಚ್ಚು ದೂರುಗಳು ಸ್ವೀಕಾರವಾಗಿದೆ. ಈ ವಿಚಾರದಲ್ಲಿ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲು ಸಿ.ಎಂ.ಕುಮಾರಸ್ವಾಮಿ ಸೂಚನೆ ನೀಡಿದ್ದಾರೆ. ಅದೇ ರೀತಿ ಕ್ರಮ ಕೈಗೊಳ್ಳಲಾಗುತ್ತೆ ಎಂದರು‌. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: