ಪ್ರಮುಖ ಸುದ್ದಿಮೈಸೂರು

ಜೂ.23ರಂದು ಪ್ರೊ.ಕೆ.ರಾಮದಾಸ್ ಅವರ ಸಂಸ್ಮರಣೆ : ಸಂವಾದ, ಪುಸ್ತಕ ಬಿಡುಗಡೆ, ಪ್ರಶಸ್ತಿ ಪ್ರದಾನ

ಮೈಸೂರು,ಜೂ.20 : ನಗರದ ದೇಶಿರಂಗ ಸಾಂಸ್ಕೃತಿಕ ಸಂಸ್ಥೆಯಿಂದ ವಿಚಾರವಾದಿ ಪ್ರಗತಿಪರ ಚಿಂತಕ ಪ್ರೊ.ಕೆ.ರಾಮದಾಸ್ ನೆನಪಿನಲ್ಲಿ ಸಂವಾದ, ಪುಸ್ತಕ ಬಿಡುಗಡೆ ಹಾಗೂ ಲೇಖನ ಪ್ರಶಸ್ತಿ ಪ್ರದಾನ ರಾಜ್ಯ ಮಟ್ಟದ ಕಾರ್ಯಕ್ರಮವನ್ನ ಜೂ.23ರಂದು ಕಲಾಮಂದಿರದ ಮನೆಯಂಗಳದಲ್ಲಿ ಏರ್ಪಡಿಸಲಾಗಿದೆ ಎಂದು ಸಂಸ್ಥೆ ಕಾರ್ಯದರ್ಶಿ ಕೃಷ್ನಜನಮನ ತಿಳಿಸಿದರು.

ಪ್ರೊ.ರಾಮದಾಸ್ ಅವರ 12ನೇ ವರ್ಷದ ಸಂಸ್ಮರಣೆ ಅಂಗವಾಗಿ ಆಯೋಜಿಸಿರುವ ಕಾರ್ಯಕ್ರಮವನ್ನು ಹಿರಿಯ ಪತ್ರಕರ್ತ ದಿನೇಶಅಮೀನ್ ಮಟ್ಟು ಉದ್ಘಾಟಿಸುವರು, ಪ್ರೊ.ಶಿವಸ್ವಾಮಿ, ಪ್ರೊ.ಚಂದ್ರಶೇಖರ ತುಬಾರ್, ಪ್ರೊ.ಮೈಸೂರು ಕೃಷ್ಣಮೂರ್ತಿ, ಪ್ರೊ,ತಿಮ್ಮರಾಜು ಪ್ರೊ.ಎಂ.ನಂಜುಂಡಯ್ಯ, ಅನಂತನಾಗ, ಮೈಸೂರು ಉಮೇಶ್ ಮೊದಲಾದ ರಾಮದಾಸ್ ಶಿಷ್ಯರು ಗುರುಗಳನ್ನು ನೆನಪು ಮಾಡಿಕೊಳ್ಳಲಿದ್ದಾರೆ.

ತಮ್ಮ ಸಂಪಾದಕತ್ವದಲ್ಲಿ ಪ್ರಕಟಗೊಂಡಿರುವ ‘ಕೋಮುಸೌಹಾರ್ದತೆ-ಒಂದು ಚಿಂತನೆ’ ಪುಸ್ತಕವನ್ನು ರೈತ ನಾಯಕ ಸುನಂದ ಜಯರಾಮ್ ಬಿಡುಗಡೆಗೊಳಿಸುವರು. ಸಮಾಜವಾದಿ ಚಿಂತಕ ಪ್ರೊ.ಮುಜಾಫರ್ ಅಸ್ಸಾದಿ ಅವರು ಲೇಖನ ಪ್ರಶಸ್ತಿ ಪ್ರದಾನ ಮಾಡುವರು. ಕನ್ನಡ ಹಿರಿಯ ಹೋರಾಟಗಾರ ಪ.ಮಲ್ಲೇಶ್ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯುವುದು.

ಸುಮಾರು 20 ನಿಮಿಷಗಳ ಕಿರುಚಿತ್ರ ಪ್ರದರ್ಶನವನ್ನು ನಡೆಸಲಾಗುವುದು, ಆದ್ದರಿಂದ ನಾಡಿನಾದ್ಯಂತ ಚದುರಿ ಹೋಗಿರುವ ರಾಮದಾಸ್ ಶಿಷ್ಯರು, ಹಿತೈಷಿಗಳು, ಪ್ರಗತಿಪರರು ಪಾಲ್ಗೊಳ್ಳಬೇಕೆಂದು ಕೋರಿದರು.

ಪ್ರೊ.ದಿನಮಣಿ ಗೋಷ್ಠಿಯಲ್ಲಿ ಹಾಜರಿದ್ದರು. (ವರದಿ : ಕೆ.ಎಂ.ಆರ್)

Leave a Reply

comments

Related Articles

error: