ಮೈಸೂರು

ಸರ್ಕಾರಿ ಶಾಲೆಗಳಲ್ಲಿ ಮೂಲಭೂತ ಸೌಕರ್ಯಗಳ ಕೊರತೆ ಹೆಚ್ಚು ಕಾಣುತ್ತಿದೆ : ಮಡ್ಡೀಕೆರೆ ಗೋಪಾಲ್

ಮೈಸೂರು,ಜೂ.20:- ಸಮಗ್ರ ಕರ್ನಾಟಕ ರಕ್ಷಣಾ ವೇದಿಕೆ ಮತ್ತು ಸರ್ಕಾರಿ ಶಾಲೆಗಳ ಉನ್ನತೀಕರಣ ಆಂದೋಲನ ಸಮಿತಿ ( ರಾಜ್ಯ ಮಟ್ಟದ ಅಭಿಯಾನ ) ವತಿಯಿಂದ  ಇಂದು ನಗರದ ಜೆ ಎಲ್ ಬಿ ರಸ್ತೆಯಲ್ಲಿರುವ ಮಹಾರಾಜ ಸರ್ಕಾರಿ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ವಿತರಿಸುವ ಮೂಲಕ ಚಾಲನೆ ನೀಡಲಾಯಿತು

ಸರ್ಕಾರಿ ಶಾಲೆಗಳ ಆಧುನಿಕರಣದತ್ತ ವಿದ್ಯಾರ್ಥಿಗಳ ಚಿತ್ತ ಎಂಬ ಅಭಿಯಾನದಡಿ ಸರ್ಕಾರಿ ಶಾಲಾ ಮಕ್ಕಳಿಗೆ ಪ್ರಬಂಧ ಸ್ಪರ್ಧೆ ಏರ್ಪಡಿಸಲಾಗಿತ್ತು. ಶಾಲೆಯ 80 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಅದರಲ್ಲಿ ಉತ್ತಮವಾಗಿ ಬರೆದ ನಾಲ್ಕು ಜನರನ್ನು ಆಯ್ಕೆ ಮಾಡಿ ಅವರಿಗೆ ಬಹುಮಾನ ವಿತರಿಸಲಾಯಿತು.  ಕಾರ್ಯಕ್ರಮದ ಉದ್ಘಾಟನೆಯನ್ನು ಮಾಜಿ ಕಸಾಪ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್ ನೆರವೇರಿಸಿದರು. ಬಳಿಕ ಮಾತನಾಡಿದ ಅವರು ಸರ್ಕಾರಿ ಶಾಲೆಗಳಲ್ಲಿ ಮೂಲಭೂತ ಸೌಕರ್ಯಗಳ ಕೊರತೆ ಹೆಚ್ಚು ಕಾಣುತ್ತಿದೆ. ಅದನ್ನು ಪರಿಹರಿಸಬೇಕು. ನಮ್ಮ ರಾಜ್ಯದಲ್ಲಿ 8 ಜನ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಿದ್ದಾರೆ. ಬಹುತೇಕರು ಸರ್ಕಾರಿ ಶಾಲೆಯಲ್ಲೇ ವಿದ್ಯಾಭ್ಯಾಸ ಮಾಡಿದವರು ಈಗಲೂ ಗುಣ ಮಟ್ಟದ ಶಿಕ್ಷಣ ಕಲಿಸಿದರೆ ಸರ್ಕಾರಿ ಶಾಲೆಯ ಮಕ್ಕಳು ಮುಂದಿನ ಪೀಳಿಗೆಯ ಆಸ್ತಿಗಳಾಗುತ್ತಾರೆ ಆದರೆ ಆಂಗ್ಲ ಭಾಷೆಯ ಅಗತ್ಯತೆ ಕೂಡ ಮಕ್ಕಳಿಗೆ ಇದೆ ಎಂಬುದು ಸತ್ಯ ಎಂದು ಹೇಳಿದರು. ಸರ್ಕಾರಿ ಶಾಲೆಗಳು ಆಧುನೀಕರಣವಾಗದಿದ್ದಲ್ಲಿ ಮುಂದಿನ ದಿನಗಳಲ್ಲಿ   ಮುಚ್ಚಬೇಕಾಗುವ ದುಸ್ಥಿತಿ  ಬಂದೊದಗುತ್ತದೆ ಎಂದರು.

ಆಧುನೀಕರಣದ ವಿಚಾರ ಮಂಡನೆಯನ್ನು ಮಾಡಿದ ಕರ್ನಾಟಕ ಮುಕ್ತ ವಿಶ್ವವಿದ್ಯಾಲಯ ಪ್ರವೇಶಾತಿ ನಿರ್ದೇಶಕರಾದ ಡಾ.ಶೆಲ್ವಪಿಳ್ಳೈ ಅಯ್ಯಂಗಾರ್ ಸರ್ಕಾರಿ ಶಾಲೆಗಳ ವ್ಯವಸ್ಥೆ ಖಾಸಗೀ ಶಾಲೆಗಳಿಗೆ ಸೆಡ್ಡು ಹೊಡೆಯುವ ರೀತಿ ಆಧುನೀಕರಣವಾಗಬೇಕು. ಶೌಚಾಲಯದ ವ್ಯವಸ್ಥೆ ಹೆಣ್ಣುಮಕ್ಕಳಿಗೆ ಪ್ರತ್ಯೇಕವಾಗಿ ಇರಬೇಕು. ಎಲ್ಲಾ ಕೊಠಡಿಗಳಲ್ಲೂ ಸ್ಮಾರ್ಟ ಕ್ಲಾಸ್ ಇರಬೇಕು.  ಪ್ರತೀ ಶಾಲೆಗೆ  ಉಚಿತ ಬಸ್ ವ್ಯವಸ್ಥೆಯನ್ನು ಸರ್ಕಾರ ಒದಗಿಸಬೇಕು. ಆಟದ ಮೈದಾನ ಇರಬೇಕು. ಶಾಲೆಗಳು ನವೀಕರಣ ಆಗಬೇಕು. ವೇಗದ ಯುಗದಲ್ಲಿ ಅದಕ್ಕೆ ತಕ್ಕನಾದ ವ್ಯವಸ್ಥೆ ಸರ್ಕಾರಿ ಶಾಲೆಗಳಲ್ಲಿ ಕಲ್ಪಿಸಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಮಹಾರಾಜ ಸರ್ಕಾರಿ ಪ್ರೌಢಶಾಲೆ ಉಪ ಪ್ರಾಚಾರ್ಯ  ಡಾ.ಡಿ.ಮಹೇಶ್, ಸಮಗ್ರ ಕರ್ನಾಟಕ ರಕ್ಷಣಾ ವೇದಿಕೆ ಸಂಸ್ಥಾಪಕ ಅಧ್ಯಕ್ಷ  ಹಾಗೂ ರಾಜ್ಯಾಧ್ಯಕ್ಷ  ಅರವಿಂದ್ ಶರ್ಮ, ಕನ್ನಡ ಹೋರಾಟಗಾರರಾದ ಧನಪಾಲ್ ಕುರುಬರ ಹಳ್ಳಿ, ಸಮಗ್ರ ಕರ್ನಾಟಕ ರಕ್ಷಣಾ ವೇದಿಕೆ ವಿದ್ಯಾರ್ಥಿ ಘಟಕದ ಜಿಲ್ಲಾ ಕಾರ್ಯದರ್ಶಿ ಸಾರಂಗ ಪಾಣಿ  ಹಾಗೂ ಶಾಲೆಯ ಪ್ರಾಧ್ಯಾಪಕರು ಮತ್ತು ಶಾಲಾ ಮಕ್ಕಳು ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: