ಸುದ್ದಿ ಸಂಕ್ಷಿಪ್ತ
ಆರೋಗ್ಯ ಉಚಿತ ತಪಾಸಣಾ ಶಿಬಿರ.25.
ಮೈಸೂರು,ಜೂ.20 : ಗೌತಮ ಮಹಾಬೋಧಿ ಸೇವಾ ಟ್ರಸ್ಟ್ ಹಾಗೂ ನಾರಾಯಣಾಲಯ ಹೆಲ್ತ್ ಸಿ.ಎಸ್.ತಂಡದಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಜೂ.25ರಂದು ಕೆಸರೆಯ ಸರ್ಕಾರಿ ವೃತ್ತಿಪರ ಕಾಲೇಜು ವಿದ್ಯಾರ್ಥಿ ನಿಲಯದಲ್ಲಿ ಏರ್ಪಡಿಸಲಾಗಿದೆ.
ರಕ್ತದೊತ್ತಡ, ಮಧುಮೇಹ, ಇಸಿಜಿ, ಹಿಮೋಗ್ಲೋಬಿನ್, ಪಲ್ಸ್ ಆಕ್ಸಿಮೆಟರಿ, ಭೌತಿಕದ್ರವ್ಯರಾಶಿ ಸೂಚಿ, ಸ್ತನದ ಕ್ಯಾನ್ಸರ್ ಅರಿವು ಮತ್ತು ಪರೀಕ್ಷೆ ನಡೆಸಲಾಗುವುದು ಎಂದು ಕಾರ್ಯದರ್ಶಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. (ಕೆ.ಎಂ.ಆರ್)