ಸುದ್ದಿ ಸಂಕ್ಷಿಪ್ತ

ಶಾಲಾ ಮಕ್ಕಳಿಗೆ ಸ್ಕೂಲ್ ಬ್ಯಾಗ್ ವಿತರಣೆ

ಮೈಸೂರು,ಜೂ.20-ಮೈಸೂರು ಜಿಲ್ಲಾ ಪ್ರವಾಸಿ ವಾಹನ ಚಾಲಕರ ಮತ್ತು ಮಾಲೀಕರ ಯೋಗಕ್ಷೇಮ ಅಭಿವೃದ್ಧಿ ಸಂಘ 8ನೇ ವರ್ಷದ ವಾರ್ಷಿಕ ಸರ್ವ ಸದಸ್ಯರ ಸಭೆ ಕುವೆಂಪುನಗರದ ಗಾನಭಾರತಿ ವೀಣೆ ಶೇಷಣ್ಣ ಭವನದಲ್ಲಿ ಇತ್ತೀಚೆಗೆ ನಡೆಯಿತು.

ಸಭೆಯಲ್ಲಿ ಲೆಟ್ಸ್ ಡೂ ಇಟ್ ಮೈಸೂರು ಸಂಸ್ಥೆಯ ಮಾಲೀಕ ಬಿ.ಎಸ್.ಪ್ರಶಾಂತ್ ಸಂಘದ ಸದಸ್ಯರ 130 ಮಕ್ಕಳಿಗೆ ಸ್ಕೂಲ್ ಬ್ಯಾಗ್ ವಿತರಿಸಲಾಯಿತು. ಮೈಸೂರು ಟ್ರಾವೆಲ್ ಏಜೆಂಟ್ ಅಸೋಸಿಯೇಷನ್ ಕಾರ್ಯಕಾರಿ ಸಮಿತಿಯಿಂದ ಪುಸ್ತಕ ವಿತರಿಸಲಾಯಿತು.

ಟ್ರಾಕ್ ಪಾರ್ಕ್ ಮಾಲೀಕ ಜಯಕುಮಾರ್ ಸ್ಪೈಸ್ ಟ್ರಿಪ್ ಕಂಪನಿ ಅವರಿಂದ ನಾಲ್ಕು ಮಂದಿ ಪ್ರತಿಭಾವಂತ ಎಸ್ಎಸ್ಎಲ್ ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ ಸಹಾಯಧನ ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷ ಎಸ್.ನಾಗರಾಜು, ಕಾರ್ಯದರ್ಶಿ ಕೆ.ಟಿ.ದಿವಾಕರ್, ಟ್ರಾವಲ್ ಏಜೆಂಟ್ ಅಸೋಸಿಯೇಷನ್ ಅಧ್ಯಕ್ಷ ಶಿವಲಿಂಗು ಇತರರು ಉಪಸ್ಥಿತರಿದ್ದರು. (ಎಂ.ಎನ್)

 

Leave a Reply

comments

Related Articles

error: