ಮೈಸೂರು

ಮಾಪನ ಇಲಾಖೆ ಆದೇಶದಂತೆ ಪೆಟ್ರೋಲ್ ಅಳತೆ: ಇಂಡಿಯನ್ ಆಯಿಲ್ ಅಧ್ಯಕ್ಷ ಪಾಟೀಲ್ ಸ್ಪಷ್ಟನೆ

ಫೆ.4 ರಂದು ಬೆ.11.30 ರಲ್ಲಿ ಗ್ರಾಹಕನೊಬ್ಬ ಪಿರಿಯಾಪಟ್ಟಣದಲ್ಲಿರುವ ಮೆ.ಶೌರ್ಯ ಪ್ಯೂಯಲ್ ಸ್ಟೇಷನ್ ನಲ್ಲಿ 150 ರೂ. ಗೆ ಪೆಟ್ರೋಲ್ ಖರೀದಿ ಮಾಡಿ, ಪುನಃ 11.45 ಕ್ಕೆ ವಾಪಸ್ ಪೆಟ್ರೋಲ್ ಬಂಕ್ ಗೆ ಬಂದು ಪೆಟ್ರೋಲ್ ಕಡಿಮೆ ಇರುವುದಾಗಿ ಅಳತೆ ಮಾಡಿಕೊಡಬೇಕೆಂದು ಒತ್ತಾಯಿಸಿದ್ದರ ಪರಿಣಾಮವಾಗಿ ಪೆಟ್ರೋಲ್ ಬಂಕ್ ನ ಸಿಬ್ಬಂದಿ ಮತ್ತು ಗ್ರಾಹಕನ ನಡುವೆ ಉಂಟಾಗಿದ್ದ ಭಿನ್ನಾಭಿಪ್ರಾಯಗಳಿಗೆ ಶುಕ್ರವಾರ ಫೆಡರೇಷನ್ ಆಫ್ ಪೆಟ್ರೋಲಿಯಂ ಟ್ರೇಡರ್ಸ್ ನಡೆಸಿದ ಸುದ್ದಿಗೋಷ್ಠಿಯಲ್ಲಿ ಇಂಡಿಯನ್ ಆಯಿಲ್ ನ ಅಧ‍್ಯಕ್ಷರಾದ ಪಾಟೀಲ್ ಅವರು ಸ್ಪಷ್ಟನೆ ನೀಡಿದರು.

ಸರ್ಕಾರದ ಆದೇಶದ ಪ್ರಕಾರ ಮಾಪನ ಇಲಾಖೆಯವರು ದೃಢೀಕರಿಸಿರುವ 5 ಲೀಟರ್ ಮಾಪನದ ಮೂಲಕ ಅಳತೆ ಮಾಡಿ ಮಾಪನದಲ್ಲಿ ಅಳತೆ ಮಾಡಲಾಗುತ್ತದೆ. ಪ್ರತಿ 5 ಲೀಟರ್ 25 ಎಂ.ಎಲ್ ವ್ಯತ್ಯಾಸವಿರಬಹುದು. ಪ್ಲಾಸ್ಟಿಕ್ ಕ್ಯಾನ್ ಮತ್ತು ಬಾಟಲ್ ಗಳು ಮಾಪನ ಇಲಾಖೆಯಿಂದ ದೃಢೀಕರಿಸಲ್ಪಟ್ಟಿಲ್ಲವಾದ್ದರಿಂದ ಅಳತೆ ಮಾಡಲು ಕಾನೂನಿನಲ್ಲಿ ಅವಕಾಶವಿಲ್ಲ ಎಂದು ಸ್ಪಷ್ಟೀಕರಿಸಿದರು.

ಇದು ಪೆಟ್ರೋಲ್ ಬಂಕ್ ಗಳಿಗೆ ಕೆಟ್ಟ ಹೆಸರು ತರಲು ಮಾಡಿರುವ ಉದ್ದೇಶಪೂರ್ವಕ ಗಲಾಟೆ ಎಂದು ಆರೋಪಿಸಿದರು. ಯಾವುದೇ ಪೆಟ್ರೋಲ್ ಬಂಕ್ ಗಳು ಮೋಸ ಮಾಡುವುದಿಲ್ಲ. ಸೇವಾ ಮನೋಭಾವನೆಯಲ್ಲಿ ಗೌರವಯುತವಾಗಿ ಕಾರ್ಯ ನಿರ್ವಹಿಸುತ್ತಿವೆ. ಸಾರ್ವಜನಿಕರು ಇದರ ಬಗ್ಗೆ ಯಾವುದೇ ಭಿನ್ನಾಭಿಪ್ರಾಯಗಳನ್ನು ಹೊಂದಬಾರದು ಎಂದರು.

ಸುದ್ದಿಗೋಷ್ಠಿಯಲ್ಲಿ ಭಾರತ್ ಪೆಟ್ರೋಲಿಯಂನ ಅಧ‍್ಯಕ್ಷ ಗೋವಿಂದರಾಜು, ಹಿಂದೂಸ್ತಾನ್ ಪೆಟ್ರೋಲಿಯಂನ ಅಧ‍್ಯಕ್ಷ ನಾರಾಯಣಸ್ವಾಮಿ, ಕಾರ್ಯದರ್ಶಿ ಮಂಜೇಶ್ ಹಾಜರಿದ್ದರು.

Leave a Reply

comments

Related Articles

error: