ಪ್ರಮುಖ ಸುದ್ದಿ

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿ ಮಾಡಿ ಐ.ಬಿ.ಪಿ.ಎಸ್ ಪರೀಕ್ಷೆ ಸಂಬಂಧ ಅನುಭವಿಸುತ್ತಿರುವ ಸಮಸ್ಯೆ ವಿವರಿಸಿದ ಸಂಸದರು

ದೇಶ(ನವದೆಹಲಿ)ಜೂ.21:- ಕೇಂದ್ರ ಹಣಕಾಸು ಸಚಿವೆ  ನಿರ್ಮಲಾ ಸೀತಾರಾಮನ್  ಅವರನ್ನು  ಭೇಟಿ ಮಾಡಿದ ಸಂಸದರಾದ ಪ್ರತಾಪ್ ಸಿಂಹ ಮತ್ತು ತೇಜಸ್ವಿ ಸೂರ್ಯ, ಶೋಭಾ ಕರಂದ್ಲಾಜೆ, ಬಿ.ವೈ ರಾಘವೇಂದ್ರ ಇವರು  ಕರ್ನಾಟಕದ ವಿದ್ಯಾರ್ಥಿಗಳು   ಐ.ಬಿ.ಪಿ.ಎಸ್  ಪರೀಕ್ಷೆಗೆ ಸಂಬಂಧಿಸಿದಂತೆ ಅನುಭವಿಸುತ್ತಿರುವ ಸಮಸ್ಯೆಗಳ ಬಗ್ಗೆ  ವಿವರಿಸಿದರು.

2014 ರಲ್ಲಿ  ಹೊರಡಿಸಲಾಗಿದ್ದ  ಅಧಿಸೂಚನೆಯನ್ನು  ಮತ್ತೆ  ಜಾರಿಗೊಳಿಸಬೇಕು ಹಾಗೂ 2014 ರ ಅಧಿಸೂಚನೆಯಲ್ಲಿದ್ದಂತೆ  ಸ್ಥಳೀಯ ಭಾಷೆಯಲ್ಲಿ ಕಡ್ಡಾಯವಾಗಿ  1 ರಿಂದ 10 ನೇ ತರಗತಿಯವರೆಗೆ  ವ್ಯಾಸಂಗ ಮಾಡಿರುವ ವಿದ್ಯಾರ್ಥಿಗಳಿಗೆ ಮಾತ್ರ  ಆರ್.ಆರ್.ಬಿ ಪರೀಕ್ಷೆಗೆ ಅರ್ಜಿ  ಸಲ್ಲಿಸಲು  ಅವಕಾಶ ಮಾಡಿಕೊಡಬೇಕೆಂದು ವಿನಂತಿಸಿದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: