ಪ್ರಮುಖ ಸುದ್ದಿಮೈಸೂರು

ಎರಡು ಗುಂಪುಗಳ ನಡುವೆ ಘರ್ಷಣೆ : ಯುವಕನ ಹತ್ಯೆ

ಒಂದೇ ಸಮುದಾಯದ ಎರಡು ಗುಂಪುಗಳ ನಡುವೆ  ನಡೆದ ಘರ್ಷಣೆ ಓರ್ವ ಯುವಕನ ಹತ್ಯೆಯಲ್ಲಿ ಕೊನೆಯಾದ ಘಟನೆ ಪಾಂಡವಪುರದಲ್ಲಿ ನಡೆದಿದೆ.
ಕೊಲೆಯಾದಾತನನ್ನು ಶಹಬುದ್ದೀನ್ (19)ಎಂದು ಗುರುತಿಸಲಾಗಿದೆ. ತಮ್ಮ ಸಂಘಟನೆ ಸೇರಲು ಒಪ್ಪದ ಯುವಕನನ್ನು ಬರ್ಬರವಾಗಿ ಪಾಂಡವಪುರ ಪಟ್ಟಣದ ಬಸವನಗುಡಿಯಲ್ಲಿ ಹತ್ಯೆಗೈಯ್ಯಲಾಗಿದೆ.
ಸುಹೇಲ್ ಮತ್ತು ಆತನ ಸಹಚರು ಹತ್ಯೆ  ಮಾಡಿದ್ದಾರೆಂಬ ಆರೋಪ ಕೇಳಿ ಬಂದಿದೆ.
ಕಳೆದ ರಾತ್ರಿ ಶಹಬುದ್ಧೀನ್ ಮೇಲೆ ಹಲ್ಲೆ ನಡೆಸಿದ್ದ ಸುಹೇಲ್,ತಬ್ಲಿಕ್ ಜಮಾಯತ್ ಸಂಘಟನೆಗೆ ಸೇರುವಂತೆ ಸಹಚರರ ಜೊತೆ ಸೇರಿ ಒತ್ತಡ ಹೇರಿದ್ದ ಎನ್ನಲಾಗಿದೆ. ಇದಕ್ಕೊಪ್ಪದ ಶಹಬುದ್ಧೀನ್ ಮೇಲೆ ಮಾರಕಾಸ್ತ್ರಗಳಿಂದ ದಾಳಿ ನಡೆಸಲಾಗಿತ್ತು.ತೀವ್ರವಾಗಿ ಗಾಯಗೊಂಡ  ಶಹಬುದ್ದೀನ್ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ.
ಶಹಬುದ್ಧೀನ್ ಮನೆ ಬಳಿ ಬಂದು ಹಲ್ಲೆ ಮಾಡಿ ಸುಹೇಲ್ ಪರಾರಿಯಾಗಿದ್ದಾನೆ ಎಂದು ತಿಳಿದು ಬಂದಿದೆ.
ಪಾಂಡವಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

comments

Related Articles

error: