ಪ್ರಮುಖ ಸುದ್ದಿಮೈಸೂರು

ಅವ್ಯವಹಾರ, ಅಧಿಕಾರದ ದುರುಪಯೋಗ : ನಂಜನಗೂಡು ತಾಲೂಕು ಉಪಕಾರಾಗೃಹದ ಜೈಲರ್ ಎನ್ ಎಸ್ ಶಿವಕುಮಾರ್ ಅಮಾನತು

ರಾಜ್ಯ(ಉಡುಪಿ)ಜೂ.23:-  2012-13ರಲ್ಲಿ ಉಡುಪಿ ಜಿಲ್ಲಾ ಕಾರಾಗೃಹದ ಪ್ರಭಾರಿ ಅಧಿಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾಗ  ಎನ್ ಎಸ್ ಶಿವಕುಮಾರ್ ಅವರು ಅವ್ಯವಹಾರ, ಅಧಿಕಾರದ ದುರುಪಯೋಗ, ಸರ್ಕಾರಕ್ಕೆ ಆರ್ಥಿಕ ನಷ್ಟ ಉಂಟು ಮಾಡಿರುವುದು ಲೆಕ್ಕ ಪರಿಶೋಧನಾ ವರದಿಯಲ್ಲಿ ಕಂಡು ಬಂದಿದ್ದು ಅವರನ್ನು ಹುದ್ದೆಯಿಂದ ಅಮಾನತುಗೊಳಿಸಲಾಗಿದೆ.

ಇದೀಗ ನಂಜನಗೂಡು ತಾಲೂಕು ಉಪಕಾರಾಗೃಹದ ಜೈಲರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದು, ಈ ಹಿಂದೆ   ಎನ್.ಎಸ್.ಶಿವಕುಮಾರ್ ಓರ್ವ ಜವಾಬ್ದಾರಿಯುತ ಸರ್ಕಾರಿ ನೌಕರನಾಗಿ ಸರ್ಕಾರದ ನೀತಿ ನಿಯಮಾವಳಿಗಳಿಗೆ ವಿರುದ್ಧವಾಗಿ ನಂಬಿಕೆದ್ರೋಹವೆಸಗಿ ಅಧಿಕಾರವನ್ನು ದುರುಪಯೋಗಪಡಿಸಿಕೊಂಡಿದ್ದು ಸುಮಾರು 3,86,814ರೂ.ಗಳ ಸರ್ಕಾರದ ಹಣವನ್ನು ದುರುಪಯೋಗಪಡಿಸಿಕೊಂಡು ಸರ್ಕಾರಕ್ಕೆ ಆರ್ಥಿಕ ನಷ್ಟವನ್ನು ಉಂಟುಮಾಡಿದ್ದಾರೆ. ಈ ಕುರಿತು ಉಡುಪಿ ಜಿಲ್ಲೆಯ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಥಮ ವರ್ತಮಾನ ವರದಿ ದಾಖಲಾಗಿದ್ದು, ಅದಕ್ಕಾಗಿ ಇವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತ್ತಿನಲ್ಲಿರಿಸಲಾಗಿದೆ ಎಂದು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ , ಕಾರಾಗೃಹಗಳ ಮಹಾನಿರೀಕ್ಷಕ ಎನ್.ಎಸ್. ಮೇಘರಿಖ್ ತಿಳಿಸಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: