ಮನರಂಜನೆ

ತಮ್ಮ ಮುದ್ದು ಪುತ್ರಿಗೆ ನಾಮಕರಣ ಮಾಡಿದ ರಾಕಿಂಗ್ ಸ್ಟಾರ್ ಯಶ್ ದಂಪತಿ

ರಾಜ್ಯ(ಬೆಂಗಳೂರು)ಜೂ.24:-  ಚಂದನವನದ ಖ್ಯಾತ ನಟ ರಾಕಿಂಗ್​ ಸ್ಟಾರ್​ ಯಶ್​ ಹಾಗೂ ನಟಿ ರಾಧಿಕಾ ಪಂಡಿತ್​ ತಮ್ಮ ಪುತ್ರಿಗೆ ನಿನ್ನೆ ನಾಮಕರಣ ಮಾಡಿದ್ದಾರೆ.

ನಾಮಕರಣ ಮಾಡುವ ಮೂಲಕ ಅಭಿಮಾನಿಗಳಿಗೆ ಶುಭ ಸುದ್ದಿ ನೀಡಿದ್ದಾರೆ.   ತಮ್ಮ ಮುದ್ದಿನ ಮಗಳಿಗೆ ಯಾವ ಹೆಸರಿಡಲಿದ್ದಾರೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿತ್ತು.  ಈಗ ಈ ಕುತೂಹಲಕ್ಕೆ ತೆರೆಬಿದ್ದಿದೆ.

ಯಶ್‌ ಮತ್ತು ರಾಧಿಕಾ ತಮ್ಮ ಪುತ್ರಿಗೆ   ‘ಆಯ್ರಾ’ ಎಂಬ ಮುದ್ದಾದ ಹೆಸರನ್ನು ನಾಮಕರಣ ಮಾಡಿದ್ದಾರೆ. ರಾಧಿಕಾ ಮತ್ತು ಯಶ್ ಇಬ್ಬರ ಹೆಸರನ್ನು ಸೇರಿಸಿ ಮಗಳಿಗೆ ಹೊಸ ಹೆಸರು ಇಟ್ಟಿದ್ದು, ಇದರಲ್ಲಿ ‘AYRA’ ರಾಧಿಕಾ ಮತ್ತು ಯಶ್ ಹೆಸರಿನಲ್ಲಿರುವ ಅಕ್ಷರಗಳು ಬರಲಿವೆ. ಆಯ್ರಾ ಎಂದರೆ ‘ಗೌರವಾನ್ವಿತ’ ಎಂದು ಅರ್ಥ ಬರುತ್ತದೆ ಎನ್ನಲಾಗಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: