ಪ್ರಮುಖ ಸುದ್ದಿ

ನೀರಿನ ಟ್ಯಾಂಕರ್ ಲಾರಿ ಮತ್ತು ಬೈಕ್ ಮುಖಾಮುಖಿ ಡಿಕ್ಕಿ : ಅಣ್ಣ ತಂಗಿ ಸ್ಥಳದಲ್ಲೇ ಸಾವು

ರಾಜ್ಯ(ಚಿಕ್ಕಮಗಳೂರು)ಜೂ.24:- ನೀರಿನ ಟ್ಯಾಂಕರ್ ಲಾರಿ ಮತ್ತು  ಬೈಕ್ ಮುಖಾಮುಖಿ ಡಿಕ್ಕಿಯಾದ ಪರಿಣಾಮ  ಬೈಕ್ ನಲ್ಲಿದ್ದ ಅಣ್ಣ ತಂಗಿ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಚಿಕ್ಕಮಗಳೂರು ತಾಲೂಕಿನ ಹಳೆ ಲಕ್ಯಾ ಗ್ರಾಮದಲ್ಲಿ ನಡೆದಿದೆ.

ಮೃತರನ್ನು ಕಡೂರಿನ ಎಸ್. ಬಿದರೆ ಗ್ರಾಮದ ನಿವಾಸಿಗಳಾದ ಲತಾ ಮಣಿ (25) ಅಶೋಕ್ (30) ಎಂದು ಗುರುತಿಸಲಾಗಿದ್ದು, ಮಗುವಿಗೆ ಗಂಭೀರ ಗಾಯಗಳಾಗಿದ್ದು, ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಎಸ್ ಬಿದರೆಯಿಂದ ಚಿಕ್ಕಮಗಳೂರಿಗೆ ಬರುವಾಗ ದುರ್ಘಟನೆ ನಡೆದಿದೆ.  ಸ್ಥಳಕ್ಕೆ‌ ಚಿಕ್ಕಮಗಳೂರು ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಟ್ಯಾಂಕರ್ ಚಾಲಕ ಮಗುವನ್ನು ಆಸ್ಪತ್ರೆಗೆ ರವಾನಿಸಿ ಮಾನವೀಯತೆ ಮೆರೆದಿದ್ದಾರೆ. ಟ್ಯಾಂಕರ್ ಲಾರಿ ಲಕ್ಯಾ ಗ್ರಾಮದ ಪಾಂಡು ಎಂಬವರಿಗೆ ಸೇರಿದ್ದಾಗಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: