ಪ್ರಮುಖ ಸುದ್ದಿಮೈಸೂರು

ಕೋಮು ಸಾಮರಸ್ಯಕ್ಕೆ ಧಕ್ಕೆಯುಂಟು ಮಾಡುತ್ತಿರುವ ದಲಿತ ನಾಯಕನ ವಿರುದ್ಧ ಹೋರಾಟದ ಎಚ್ಚರಿಕೆ

ಮೈಸೂರು ಜೂ.24 : ಬೋವಿ, ವಡ್ಡ, ಲಂಬಾಣಿ ಜನಾಂಗವನ್ನು ಪರಿಶಿಷ್ಟ ಜಾತಿಯಿಂದ ತೆಗೆದು ಹಾಕಲಾಗಿದೆ ಎಂದು ಸುಳ್ಳು ಸುದ್ದಿಯನ್ನು ಹಬ್ಬಿಸುವ ಮೂಲಕ ಕೋಮು ಸಾಮರಸ್ಯಕ್ಕೆ ಧಕ್ಕೆ ಎಸಗುತ್ತಿರುವ ದಲಿತ ನಾಯಕನ ವಿರುದ್ಧ ಹೋರಾಟ ಮಾಡಬೇಕಾಗುವುದು ಎಂದು ಶ್ರೀಶಿವಯೋಗಿ ಸಿದ್ಧರಾಮೇಶ್ವರ ಭೋವಿ ಹಿತರಕ್ಷಣಾ ಸಮಿತಿ ಆಕ್ರೋಶ ವ್ಯಕ್ತಪಡಿಸಿತು.

ಸಮಿತಿ ಅಧ್ಯಕ್ಷ ಜಿ.ನಾಗರಾಜು ಅವರು ಸೋಮವಾರ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿ, ದಲಿತ ವೇದಿಕೆ ಅಧ್ಯಕ್ಷ ಮಲ್ಲಿಕಾರ್ಜುನ ಈಚೆಗೆ ಪತ್ರಿಕಾಗೋಷ್ಠಿಯಲ್ಲಿ ಹಿಂದುಳಿದ ಜನಾಂಗಗಳನ್ನು ಪರಿಶಿಷ್ಟ ಜಾತಿಯಿಂದ ಕೈಬಿಟ್ಟಿರುವುದಾಗಿ ಸುಳ್ಳು ಸುದ್ದಿ ಹರಡುವ ಮೂಲಕ ಜಾತಿ ಜಾತಿ ನಡುವೆ ವೈಷಮ್ಯ ಬಿತ್ತುತ್ತಾ ಸಾಮರಸ್ಯವನ್ನು ಕದಡುತ್ತಿರುವರು. ಈ ಬಗ್ಗೆ ತಮ್ಮಲ್ಲಿ ಯಾವುದಾದರು ವರದಿ ದಾಖಲೆಗಳಿದ್ದರೆ ಪ್ರಸ್ತುತ ಪಡಿಸಿ ಇಲ್ಲವೇ ಕೋಮು ಸೌಹಾರ್ದ ಕದಡಲು  ಕಾರಣರಾಗಲಿದ್ದೀರಾ ಎಂದು ಕ್ರೋಧ ವ್ಯಕ್ತಪಡಿಸಿದರು.

ಯಾವುದೇ ದಾಖಲೆಗಳಿಲ್ಲ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಎಲ್ಲಿಯೂ ಈ ಬಗ್ಗೆ ಚರ್ಚೆ ನಡೆಸಿಲ್ಲ, ಹೀಗಿದ್ದರೂ ನಮ್ಮ ಜನಾಂಗವನ್ನು ಪರಿಶಿಷ್ಟ ಜಾತಿಯಿಂದ ಕೈ ಬಿಡಲಾಗಿದೆ ಎಂದು ಯಾಕೆ ಸುಳ್ಳು ಹಬ್ಬಿಸುತ್ತಿದ್ದೀರಾ ಎಂದು ಪ್ರಶ್ನಿಸಿ, ನಾವುಗಳು ಸಮಾಜದಲ್ಲಿ ಸದೋರರಂತೆ ಬದುಕು ಸಾಗಿಸುತ್ತಿದ್ದು ಇಲ್ಲಿ ವಿಷ ಬೀಜ ಬಿತ್ತಲು ಯತ್ನಿಸಬೇಡಿ, ಇಲ್ಲವಾದಲ್ಲಿ ತಮ್ಮ ವಿರುದ್ಧ ಉಗ್ರ ಹೋರಾಟ ನಡೆಸಬೇಕಾಗುವುದು ಎಂದು ಎಚ್ಚರಿಕೆ ನೀಡಿದರು.

ಪ್ರಧಾನ ಕಾರ್ಯದರ್ಶಿ ಪಿ.ಮಲ್ಲಯ್ಯ, ಸಹ ಕಾರ್ಯದರ್ಶಿ ಹೆಚ್.ಕೆ.ದೇವರಾಜು, ಸಂಘಟನಾ ಕಾರ್ಯದರ್ಶಿ ಮಾದೇವು ಹಾಗೂ ಇತರರು ಹಾಜರಿದ್ದರು. (ವರದಿ : ಕೆ.ಎಂ.ಆರ್)

Leave a Reply

comments

Related Articles

error: