ಪ್ರಮುಖ ಸುದ್ದಿಮೈಸೂರು

ಪ್ರಶ್ನಿಸುವ ಮನೋಭಾವ ಮತದಾರರು ಬೆಳೆಸಿಕೊಳ್ಳಿ : ಅಲಗೂಡು ಲಿಂಗರಾಜು

ಮೈಸೂರು. ಜೂ.24 : ಪ್ಯಾಷನ್ ಶೋ ನಂತೆ ಸರ್ಕಾರ ನಡೆಸುತ್ತಿದ್ದು ಇದರಿಂದ ಮತದಾರರಿಗೆ ಪುಕ್ಕಟ್ಟೆ ಮನರಂಜನೆ ದೊರೆಯಿತ್ತಿದೆಯೇ ಹೊರತು ರಾಜ್ಯದಲ್ಲಿ ಯಾವುದೇ‌ ಅಭಿವೃದ್ಧಿ ಕಾರ್ಯಕ್ರಮಗಳು ಜರುಗುತ್ತಿಲ್ಲ ಎಂದು ಈಚೆಗೆ ಲೋಕಸಭಾ ಚುನಾವಣೆಯ ಪರಾಜಿತ ಅಭ್ಯರ್ಥಿ ಅಲಗೂಡು ಲಿಂಗರಾಜು ದೂರಿದರು.

ಸೋಮವಾರ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು. ರಾಜಕೀಯ ಎಂದರೆ ವಿದ್ಯಾರ್ಥಿಗಳು ವಿಮುಖರಾಗಬಾರದು.ತಾವು ಸಹ ದೇಶದ ಅಭಿವೃದ್ಧಿಗೆ ಸಹಯೋಗ ನೀಡಬೇಕಾಗಿದ್ದು ರಾಜಕಾರಣಕ್ಕೆ ಪ್ರವೇಶಿಸಬೇಕು. ಅಲ್ಲದೇ ಚುಮಾವಣಾ‌ ಪೂರ್ವದಲ್ಲಿ ನೀಡಿದ ಪ್ರಣಾಳಿಕೆಯಲ್ಲಿ ಅಳವಡಿಸಿದ ಕಾರ್ಯಕ್ರಮಗಳನ್ನು ಜಾರಿಗೊಳಿಸದಲ್ಲಿ ಪ್ರಶ್ನಿಸಿ, ಖಂಡಿಸಿ, ಆಗ್ರಹಿಸಿ ಒತ್ತಾಯಿಸುವ ಮನೋಭಾವ ಬೆಳೆಸಿಕೊಳ್ಳಬೇಕೆಂದು ತಿಳಿಸಿದರು.

ಸಂದೇಶ್ ಡಿಸೋಜಾ ಗೋಷ್ಠಿಯಲ್ಲಿ ಹಾಜರಿದ್ದರು. (ವರದಿ : ಕೆ.ಎಂ.ಆರ್)

Leave a Reply

comments

Related Articles

error: