ಮೈಸೂರು

ದೇಶದ ಕೈಗಾರಿಕಾ ಕ್ಷೇತ್ರದಲ್ಲಿ ಕ್ರಾಂತಿ ಮಾಡಿದವರು ಡಾ. ಶಾಮ್ ಪ್ರಸಾದ್ ಮುಖರ್ಜಿ : ಚೇತನ್ ಮಂಜುನಾಥ್ ಬಣ್ಣನೆ

ಮೈಸೂರು,ಜೂ.24:- ಜನ ಸಂಘದ ಸಂಸ್ಥಾಪಕ ಡಾ. ಶಾಮ್ ಪ್ರಸಾದ್ ಮುಖರ್ಜಿ ಅವರ ಬಲಿದಾನ ದಿನದಂದು ಪರಿಸರ ಸ್ನೇಹಿ ತಂಡದ ವತಿಯಿಂದ ಗಾಂಧಿ ನಗರದ ಶ್ರೀ ಶಿವಯೋಗಿ ಶಾಲೆಯ ಆವರಣದಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಆ ನಂತರ  ವಿವಿಧ ಸಸಿಗಳನ್ನು ನೆಡುವ ಮುಖಾಂತರ ಅವರನ್ನು ಸ್ಮರಿಸಲಾಯಿತು.

ಬಿಜೆಪಿ ಯುವ ಮುಖಂಡರಾದ   ಚೇತನ್ ಮಂಜುನಾಥ್ ಮಾತನಾಡಿ ಬಲಿದಾನ ಸ್ಮರಣೆ ಕಾರ್ಯಕ್ರಮದಲ್ಲಿ ಕೈಗಾರಿಕಾ ಕ್ರಾಂತಿ ಹರಿಕಾರ ಮುಖರ್ಜಿ ಅವರು  ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕ ನಂತರ ಮೊದಲ ಕೈಗಾರಿಕಾ ಮಂತ್ರಿಯಾಗಿದ್ದರು.   ದೇಶದ ಕೈಗಾರಿಕಾ ಕ್ಷೇತ್ರದಲ್ಲಿ  ಕ್ರಾಂತಿ ಮಾಡಿದವರು. ‘ಬೆಂಗಳೂರಿನಲ್ಲಿ ವಿಮಾನ ತಯಾರಿಸುವ ಕಾರ್ಖಾನೆ, ವಿಶಾಖ ಪಟ್ಟಣದಲ್ಲಿ ಹಡಗು ನಿರ್ಮಾಣ, ಬಿಹಾರದಲ್ಲಿ ರಸಗೊಬ್ಬರ ತಯಾರಿಕೆ ಕಾರ್ಖಾನೆ, ಪಶ್ಚಿಮ ಬಂಗಾಳದಲ್ಲಿ ರೈಲ್ವೆ ಎಂಜಿನ್ ತಯಾರಿಸುವ ಕಾರ್ಖಾನೆ ಆರಂಭಿಸಿದ ಕೀರ್ತಿ ಮುಖರ್ಜಿ ಅವರಿಗೆ ಸಲ್ಲುತ್ತದೆ ಎಂದರು. ದೇಶದಲ್ಲಿ ಮುಸ್ಲಿಂ ಬಾಹುಳ್ಯವುಳ್ಳ ಪ್ರದೇಶದಲ್ಲಿ ಹಿಂದುಗಳ ಮೇಲೆ ಆಗುತ್ತಿರುವ ದೌರ್ಜನ್ಯ ವಿರೋಧಿಸಿ ಕಾಂಗ್ರೆಸ್‌ನ ದ್ವಂದ್ವ ನೀತಿಯಿಂದ ಬೇಸತ್ತು 1949 ರಲ್ಲಿ ನೆಹರು ಸಂಪುಟದಿಂದ ಹೊರ ಬಂದು ಅಂದಿನ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಸೇರಿದರು ಎಂದು ತಿಳಿಸಿದರು.

ಬಿಜೆಪಿಯ ಯುವ ಮುಖಂಡ ಲೋಹಿತ್ ಮಾತನಾಡಿ ರಾಷ್ಟ್ರೀಯತೆಯ ಪ್ರತಿಪಾದಕ ಶ್ಯಾಮಪ್ರಸಾದ ಅವರು. ಜಾತ್ಯಾತೀತ ಮನೋಭಾವವುಳ್ಳ ರಾಷ್ಟ್ರೀಯತೆಯ ಪ್ರತಿಪಾದಕ ಡಾ.ಶ್ಯಾಮಪ್ರಸಾದ ಮುಖರ್ಜಿ ಬಿಜೆಪಿ ಕಟ್ಟಿ ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಸ್ವಾತಂತ್ರ್ಯ ಹೋರಾಟದಲ್ಲಿಯೂ ಮುಂಚೂಣಿಯಲ್ಲಿದ್ದುಕೊಂಡೇ ಸಿದ್ಧಾಂತ ಹಾಗೂ ಮಾರ್ಗದರ್ಶನದಲ್ಲಿ ವೈರಿಗಳ ವಿರುದ್ಧ ಹೋರಾಡಿದ ರಾಷ್ಟ್ರನಾಯಕ.   ಒಂದೇ ಕಾನೂನು ಎಂದು ಒತ್ತಾಯಿಸುತ್ತಿದ್ದ ಮುಖರ್ಜಿ ಅವರು ಏಕರೂಪ ಕಾನೂನು ವ್ಯವಸ್ಥೆ ತರುವಂತೆ ನೆಹರೂ ವಿರುದ್ಧ ಧ್ವನಿ ಎತ್ತಿದ ಮೊದಲ ವ್ಯಕ್ತಿ ಎಂದರೆ ತಪ್ಪಾಗದು ಎಂದು ನುಡಿದರು.

ದೇಶದ ಪ್ರಧಾನಿ ನರೇಂದ್ರ ಮೋದಿಯವರು ದೇಶದ ಅಭಿವೃದ್ಧಿಗಾಗಿ ಹಲವಾರು ಕಾರ್ಯಕ್ರಮಗಳನ್ನು ಜಾರಿಗೆ ತಂದಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ದೇಶದ ಜನತೆ ಮತ್ತೊಮ್ಮೆ ಆಯ್ಕೆ ಮಾಡಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ  ಸಂತೋಷ್ ಕುಮಾರ್ ,ಜೀವನ್ ,ನವೀನ್ ಶೆಟ್ಟಿ, ಸುರೇಂದ್ರ,ನಾಗರಾಜು, ಹಾಗೂ ಶಾಲೆಯ ಶಿಕ್ಷಕರು ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: