ಪ್ರಮುಖ ಸುದ್ದಿಮೈಸೂರು

‘ಖಾತೆ’ ರದ್ದಾಂತ ಮುಡಾ -ಮಹಾನಗರ ಪಾಲಿಕೆ ನಡುವಿನ ತಿಕ್ಕಾಟ : ಮಾಜಿ ಮೇಯರ್ ಬಿ.ಎಲ್.ಭೈರಪ್ಪ

ಕೇಳುವವರಿಲ್ಲ ಜನಸಾಮಾನ್ಯರ ಗೋಳು

ಮೈಸೂರು, ಜೂ.24 : ಮಹಾ ನಗರಾಭಿವೃದ್ಧಿ ಪ್ರಾಧಿಕಾರದಿಂದ ಮಹಾನಗರ ಪಾಲಿಕೆಗೆ ಹಸ್ತಾಂತರವಾಗಿರುವ ನಿವೇಶನ, ಮನೆಗಳ ಖಾತೆ ಮಾಡಿಕೊಡುವ ನಿಟ್ಟಿನಲ್ಲಿ ಪಾಲಿಕೆ ನಿರ್ಲಕ್ಷ್ಯ ವಹಿಸಿದ್ದು, ಇದರಿಂದಾಗಿ ಸಾವಿರಾರು ಸಂಖ್ಯೆಯ ಮಾಲೀಕರಿಗೆ ಸಮಸ್ಯೆ ಎದುರಾಗಿದೆ ಎಂದು ಮಾಜಿ ಮೇಯರ್ ಬಿ.ಎಲ್. ಭೈರಪ್ಪ ಬೇಸರ ವ್ಯಕ್ತಪಡಿಸಿದರು.

ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪಾಲಿಕೆಯು ನಕ್ಷೆ ಮಂಜೂರಿಗೆ ಆನ್‌ಲೈನ್ ಸೌಲಭ್ಯ ಒದಗಿಸಿಕೊಡುವುದಾಗಿ ತಿಳಿಸಿದೆ. ಆದರ ಸದಸ್ಯರದಲ್ಲಿ ಆಸ್ತಿಗಳ ವಿಂಗಡಣೆ, ಮುಡಾದಿಂದ ಬಂದ ಆಸ್ತಿ, ಮೂಲ ಗ್ರಾಮಗಳಲ್ಲಿನ ಆಸ್ತಿಗಳಿಗೆ ಖಾತೆ ಮೊದಲಾದ ಕಾರ್ಯ ಪಾಲಿಕೆಯಲ್ಲಿ ಸಮರ್ಪಕವಾಗಿ ನಡೆದಿಲ್ಲ. ಹೀಗಾಗಿ ಆನ್‌ಲೈನ್ ಮೂಲಕ ನಕ್ಷೆ ಮಂಜೂರು ಮಾಡುವ ವ್ಯವಸ್ಥೆ ಜಾರಿಗೆ ದೊಡ್ಡ ಸಮಸ್ಯೆ ಎದುರಾಗಲಿದೆ.

ಇನ್ನು, ಪಾಲಿಕೆಗೆ ಹಸ್ತಾಂತರ ಮಾಡಿದ ಬಳಿವೂ ಖಾತೆ, ಕಂದಾಯಗಳಿಗೆ ನಿವೇಶನ, ಮನೆ ಮಾಲೀಕರು ಮುಡಾಕ್ಕೇ ಅಲೆಯಬೇಕಾಗಿ ಬಂದಿದೆ. ವಿಜಯನಗರ ಮೂರನೇ ಹಂತ ಮೊದಲಾದ ಕೆಲ ಬಡಾವಣೆಗಳಲ್ಲಿ ನಿವೇಶನಗಳಿಗೆ ಖಾತೆ ಮಾಡಿಕೊಟ್ಟಿದ್ದರೂ ಮೂಲ ಮಾಲೀಕರಿಂದ ಹೊಸದಾಗಿ ಖರೀದಿಸಿದವರಿಗೆ ಖಾತೆ ಮಾಡಿಕೊಡುತ್ತಿಲ್ಲ.

ಇದೇ ವೇಳೆ ಆಶ್ರಯ, ಅಂಬೇಡ್ಕರ್ ವಸತಿ ಯೋಜನೆಗಳಲ್ಲಿ ಮನೆ ದೊರಕಿಸಿಕೊಂಡವರು, ಮೂಲ ಗ್ರಾಮಗಳಲ್ಲಿ ತಂದೆ ತಾಯಿಯಿಂದ ಮನೆ ಪಡೆದ ಮಕ್ಕಳ ಹೆಸರಿಗೂ ಖಾತೆ ಮಾಡಿಕೊಡುತ್ತಿಲ್ಲ. ಹೀಗಾಗಿ ಆನ್‌ಲೈನ್ ಮೂಲಕ ನಕ್ಷೆ ಮಂಜೂರೂ ವ್ಯವಸ್ಥೆ ದಿಢೀರನೆ ಜಾರಿಗೊಳಿಸಲು ಸಾಧ್ಯವಾಗದು.

ಇದೇ ಸಂದರ್ಭದಲ್ಲಿ ಖಾತೆ ಪಡೆಯಲಾಗದವು ಮನೆ ಮಾರಾಟ, ನಿವೇಶನ ಮಾರಾಟ ಮೊದಲಾದವುಗಳನ್ನು ಮಾಡಲು ಸಾಧ್ಯವಾಗದ ಕಾರಣ ಸಮಸ್ಯೆ ಎದುರಿಸುತ್ತಿದ್ದಾರೆ. ಹೀಗಾಗಿ ಪಾಲಿಕೆ ಅಧಿಕಾರಿಗಳು ನೊಂದವರು ಪಾಲಿಕೆ ಅಥವಾ ಮುಡಾಕ್ಕೆ ಮುತ್ತಿಗೆ ಹಾಕಿ ಪ್ರತಿಭಟಿಸುವ ಮುನ್ನ ಎಚ್ಚೆತ್ತುಕೊಂಡು ಖಾತೆ ಮಾಡಿಕೊಡುವ ಕೆಲಸಕ್ಕೆ ಮುಂದಾಗಬೇಕೆಂದು ಆಗ್ರಹಿಸಿದರು.

ಮತ್ತೊಬ್ಬ ಮಾಜಿ ಮೇಯರ್ ಪುರುಷೋತ್ತಮ್, ಜಯಂತ್ ಹಾಜರಿದ್ದರು. (ವರದಿ : ಕೆ.ಎಂ.ಆರ್)

Leave a Reply

comments

Related Articles

error: