ಮೈಸೂರು

ಯುವತಿಯ ಅಪಹರಣ ಪ್ರಕರಣಕ್ಕೆ ಹೊಸ ತಿರುವು

ಪೋಷಕರ ವಿರೋಧದ ಕಾರಣ ಯುವತಿಯನ್ನು ಯುವನೋರ್ವ ಅಪಹರಿಸಿರುವ ಘಟನೆ ಕೆ.ಎಂ.ದೊಡ್ಡಿ  ಸಮೀಪದ ಹನುಮಂತನಗರ ಎಬ್ರೀಡ್ಜ್‍ನಲ್ಲಿ ನಡೆದಿದ್ದು, ಪ್ರಕರಣ  ಹೊಸ ತಿರುವು ಪಡೆದುಕೊಂಡಿದೆ. ಇಬ್ಬರೂ ವಿವಾಹ ಮಾಡಿಕೊಂಡು ಪೊಲೀಸ್ ಠಾಣೆಗೆ ಹಾಜರಾಗಿದ್ದಾರೆ.
ಪೋಷಕರ ವಿರೋಧದ ಹಿನ್ನೆಲೆಯಲ್ಲಿ ಇವರಿಬ್ಬರೂ ದೇವಸ್ಥಾನಕ್ಕೆ ತೆರಳಿ ಅಲ್ಲಿ ವಿವಾಹವಾಗಿದ್ದಾರೆ ಎನ್ನಲಾಗುತ್ತಿದೆ.

ಯಡಗನಹಳ್ಳಿ ಗ್ರಾಮದ ಈರೇಗೌಡರ ಮಗ ಪ್ರಸನ್ನ ಎಂಬಾತ ಹರ್ಷಿತಾ ಎಂಬ ಯುವತಿಯನ್ನು ಪ್ರೀತಿಸುತ್ತಿದ್ದು,  ಆಕೆಯನ್ನು ಅಪಹರಿಸಿದ್ದ ಎಂದು ದೂರು ದಾಖಲಾಗಿತ್ತು.
ಅದೇ ಗ್ರಾಮದ ಸರ್ಕಾರಿ ಪ್ರಥಮ ದರ್ಜೆಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ಪಕ್ಕದ ಮನೆಯ ಯುವತಿಯನ್ನು ಪ್ರಸನ್ನ  ಪ್ರೀತಿಸುತ್ತಿದ್ದ. ಈ ಬಗ್ಗೆ ಆಕೆಯ ಮನೆಯವರ ಬಳಿ ಚರ್ಚಿಸಿ ನನಗೆ ಮದುವೆ ಮಾಡಿಕೊಡಬೇಕೆಂದು ಕೇಳಿಕೊಂಡಾಗ ಅದಕ್ಕೆ ವಿರೋಧ ವ್ಯಕ್ತಪಡಿಸಿದ್ದರು.
ತಾನು ಇಷ್ಟಪಟ್ಟ ಯುವತಿಯನ್ನು  ಕಳೆದು ಕೊಳ್ಳಬೇಕಾಗುತ್ತದೆಂದು ಕುಪಿತಗೊಂಡ ಪ್ರಸನ್ನ, ಆಕೆ ಗ್ರಾಮದಿಂದ ಕಾಲೇಜಿಗೆ ಬರುತ್ತಿದ್ದ ವೇಳೆ ಎಬ್ರೀಡ್ಜ್ ಬಳಿ ತನ್ನ ಸ್ನೇಹಿತರೊಂದಿಗೆ ಟಾಟಾಇಂಡಿಕಾ ಕಾರಿನಲ್ಲಿ ಆಕೆಯನ್ನು ಅಪಹರಿಸಿದ್ದಾನೆ. ಸ್ಥಳದಲ್ಲೇ ಇದ್ದ ಸಾರ್ವಜನಿಕರು ಕೂಡಲೇ ಕೆ.ಎಂ.ದೊಡ್ಡಿ ಪೊಲೀಸ್‍ಠಾಣೆಗೆ ದೂರು ನೀಡಿದ್ದಾರೆ. ತಕ್ಷಣ ಪೊಲೀಸರು ಎಚ್ಚೆತ್ತುಕೊಂಡು ಹಿಡಿಯಲು ಪ್ರಯತ್ನಿಸಿದರೂ ಕೂಡ ಪ್ರಯೋಜನವಾಗಿಲ್ಲ.  ಈ ಕುರಿತು ಹುಡುಗಿಯ ಸೋದರಮಾವ ಈರೇಗೌಡ ಪೊಲೀಸ್‍ಠಾಣೆಗೆ ದೂರು ನೀಡಿದ್ದರು.

Leave a Reply

comments

Related Articles

error: