ಮನರಂಜನೆ

ವಿಜಯ್ ದೇವರಕೊಂಡ ನಿರ್ಮಾಣದ ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ

ಬೆಂಗಳೂರು,ಜೂ.25-ನಟಿ ರಶ್ಮಿಕಾ ಮಂದಣ್ಣ ತಮಿಳು, ತೆಲುಗು ಚಿತ್ರರಂಗದಲ್ಲಿ ಬ್ಯುಸಿಯಿದ್ದಾರೆ. ಈ ನಡುವೆ ವಿಜಯ್ ದೇವರಕೊಂಡ ನಿರ್ಮಾಣದ ಚಿತ್ರಕ್ಕೆ ರಶ್ಮಿಕಾ ನಾಯಕಿಯಾಗಿ ಅಭಿನಯಿಸಲಿದ್ದಾರೆ ಎನ್ನಲಾಗುತ್ತಿದೆ.

ವಿಜಯ್ ದೇವರಕೊಂಡ ಕಳೆದ ವರ್ಷಕಿಂಗ್ ಆಫ್ ದಿ ಹಿಲ್ನಿರ್ಮಾಣ ಸಂಸ್ಥೆಯನ್ನು ತೆರೆದಿದ್ದಾರೆ. ವಿಜಯ್ ಬ್ಯಾನರ್ ನಿಂದ ಮೂಡಿ ಬರುತ್ತಿರುವ ಸಿನಿಮಾಗೆ ರಶ್ಮಿಕಾ ನಾಯಕಿಯಾಗಿ ಅಭಿನಯಿಸಲಿದ್ದಾರಂತೆ. ಆದರೆ ನಾಯಕ ಮತ್ತು ನಿರ್ದೇಶಕರ ಬಗ್ಗೆ ಸ್ಪಷ್ಟವಾಗಿ ಯಾವುದೆ ಮಾಹಿತಿ ಹೊರಬಿದ್ದಿಲ್ಲ. ಕೆಲ ಮೂಲಗಳ ಪ್ರಕಾರ ವಿಜಯ್ ದೇವರಕೊಂಡ ಅವರಿಗೆ ರಶ್ಮಿಕಾ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ.

ಗೀತಾ ಗೋವಿಂದಂಸಿನಿಮಾ ಮೂಲಕ ಸೂಪರ್ ಹಿಟ್ ಜೋಡಿಯಾಗಿ ಹೊರಹೊಮ್ಮಿರುವ ವಿಜಯ್ ಮತ್ತು ರಶ್ಮಿಕಾ, ಆನಂತರಡಿಯರ್ ಕಾಮ್ರೇಡ್ಸಿನಿಮಾದಲ್ಲೂ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಸದ್ಯ ಡಿಯರ್ ಕಾಮ್ರೇಡ್ ಸಿನಿಮಾ ರಿಲೀಸ್ ಗೆ ರೆಡಿಯಾಗಿದೆ. ಈಗ ಮೂರನೆ ಬಾರಿ ರಶ್ಮಿಕಾ ಮತ್ತು ವಿಜಯ್ ದೇವರಕೊಂಡ ಒಟ್ಟಿಗೆ ಅಭಿನಯಿಸುವ ಸಾಧ್ಯತೆ ಇದೆ. (ಎಂ.ಎನ್)

Leave a Reply

comments

Related Articles

error: